ADVERTISEMENT

‘ಮಾತು ಉಳಿಸಿಕೊಳ್ಳದವರು ಮನುಷ್ಯರೇ ಅಲ್ಲ’ ಎಂದು ದೇಶದ ಗಮನ ಸೆಳೆದ ಜಯದೇವ ಗಲ್ಲ

ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಜಯದೇವ ಗಲ್ಲಾ ಯಾರು?

​ಪ್ರಜಾವಾಣಿ ವಾರ್ತೆ
Published 20 ಜುಲೈ 2018, 11:48 IST
Last Updated 20 ಜುಲೈ 2018, 11:48 IST
   

ನವದೆಹಲಿ: ‘ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಂಧ್ರಪ್ರದೇಶಕ್ಕೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ’ ಎಂದು ತೆಲುಗು ದೇಶಂ ಪಕ್ಷದ ಸಂಸದ ಜಯದೇವ್ ಗಲ್ಲಾ ಆರೋಪಿಸಿದ್ದಾರೆ.

ಲೋಕಸಭೆ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ವೇಳೆ‘ಭರತ್ ಆನೇ ನೇನು’ಚಿತ್ರದ ನಾಯಕಮಹೇಶ್ ಬಾಬು ಅವರ ಶೈಲಿಯಲ್ಲಿಯೇ ಜಯದೇವ ಗಲ್ಲಾ ಅವರು, ‘ಮೇಡಂ ಸ್ಪೀಕರ್..ಬಿಫೋರ್ ಮೂವಿಂಗ್ ದ ಮೋಷನ್, ಐ ವಿಲ್ ಯೂ ಥ್ಯಾಂಕ್ಯೂ ಟು ಫಾರ್ ಫೈನಲಿ ಮೀಟಿಂಗ್ೆಟ್ ನೋ ಕಾನ್ಫಿಡೆನ್ಸ್ ಮೋಷನ್’...ಎಂದು ನಮಸ್ಕಾರ ಸಲ್ಲಿಸಿ ಮಾತು ಆರಂಭಿಸಿದರು.

’ಮೇಡಂ ಭರತ್ ಆನೇ ನೇನು’ ಸಿನಿಮಾದ ಮುಖ್ಯ ಸಂದೇಶ ನಂಬಿಕೆ. ಪ್ರಾಮೀಸ್ ಇಸ್ ಪ್ರಾಮೀಸ್ ಎಂದು ಹೇಳಿದ ಗಲ್ಲಾ, ಮೇಡಂ ಇದು ಬಿಜೆಪಿ ಮತ್ತು ಟಿಡಿಪಿಯ ನಡುವಿನ ಯುದ್ಧವಲ್ಲ. ಇದು ಬಹುತ್ವ ಮತ್ತು ನೈತಿಕತೆಯ ನಡುವಣ ಯುದ್ಧ. ಆಂಧ್ರಪ್ರದೇಶದಲ್ಲಿ 5 ಕೋಟಿ ಜನರಿದ್ದಾರೆ. ಮೇಡಂ ಇದು ಧರ್ಮ ಹೋರಾಟ ಮತ್ತು ಧರ್ಮ ಯುದ್ಧ’ ಎಂದು ಬಿಜೆಪಿ ಆಂಧ್ರಪ್ರದೇಶದ ವಿಚಾರದಲ್ಲಿ ಮಾಡುತ್ತಿರುವ ತಾರತಮ್ಯವನ್ನು ಬಿಚ್ಚಿಟ್ಟರು. ಅಲ್ಲದೇಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳೆರಡು ಆಂಧ್ರಪ್ರದೇಶಕ್ಕೆ ದ್ರೋಹ ಎಸಗಿವೆ ಎಂದು ದೂರಿದರು.

ಗಲ್ಲಾ ಅವರು 15 ವರ್ಷಗಳ ತರುವಾಯಮೊದಲ ಬಾರಿ ಲೋಕಸಭೆಯಲ್ಲಿ ಮಾತನಾಡಿದರು. ಇವರ ಭಾಷಣಕ್ಕೆ 13 ನಿಮಿಷಗಳ ಸಮಯ ನಿಗದಿ ಮಾಡಲಾಗಿತ್ತು.

‘ಪ್ರಧಾನಿ ಮೋದಿ ಅವರೇ ನೀವೇ ಹೇಳಿದ್ದೀರಿ ದೇಶದ ಎಲ್ಲಾ ಜನರ ಹಸಿವು ನೀಗುವವರೆಗೆ ನಾನು ಊಟ ಮಾಡುವುದಿಲ್ಲ ಎಂದು ಅವರ ವಾಗ್ದಾನದ ಬಗ್ಗೆ ನೆನಪಿಸಿದರು.ಪ್ರಧಾನಿ ಅವರು ಸೀಮಾಂಧ್ರವನ್ನು ‘ಸ್ಕ್ಯಾಮ್‌ ಆಂಧ್ರ’ ಎಂದು ಟೀಕಿಸಿದ್ದರು. ಆದರೆ,ಬಿಜೆಪಿ ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತಿದೆ.ಕರ್ನಾಟಕದಲ್ಲಿ ಹಲವು ದೂರುಗಳಿರುವಜನಾರ್ಧನ ರೆಡ್ಡಿ ಅವರನ್ನು ರಕ್ಷಿಸುತ್ತಿದ್ದೀರಿ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಮುನ್ನೆಲೆಗೆ ತರಲು ಪ್ರಯತ್ನಿಸಿದ್ರಿ. ಇವೆಲ್ಲಾವನ್ನು ಸಮಗ್ರವಾಗಿ ವೀಕ್ಷಿಸುತ್ತಿರುವ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ.ಸರ್ದಾರ್‌ ವಲ್ಲಬಾಭಾಯಿ ಪಟೇಲ್‌ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ನೂರಾರು ಕೋಟಿ ಅನುದಾನ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಆದರೆ, ಆಂದ್ರದ ರಾಜಧಾನಿಗೆ ಯಾವ ಯೋಜನೆಯನ್ನೂ ನೀಡುತ್ತಿಲ್ಲ’ ಎಂದು ಕಿಡಿಕಾರಿದರು.

ಪ್ರಧಾನಿ ನರೇಂದ್ರ ಮೋದಿ ಅವರೇ ’ಆಂಧ್ರಪ್ರದೇಶಕ್ಕೆ ನೀವು ನೀಡಿದಆಶ್ವಾಸನೆಗಳನ್ನುಉಳಿಸಿಕೊಳ್ಳದೇ ಹೋದಲ್ಲಿ ಸದನದಲ್ಲಿನಿಮ್ಮ ಪಕ್ಷ ವರ್ಚಸ್ಸನ್ನುಕಳೆದುಕೊಳ್ಳಲಿದೆ. ಇದುಬಿಜೆಪಿಗೆ ಹಾಕುತ್ತಿರುವ ಬೆದರಿಕೆಯಲ್ಲ. ಇದು ಶಾಪ ಈ ಮಾತು ಬಂದಿರುವುದು ನೊಂದ, ಖಿನ್ನತೆಗೆ ಒಳಗಾಗಿರುವಆಂದ್ರಪ್ರದೇಶದ ಜನರಿಂದ’ ಎಂದು ಎಚ್ಚರಿಸಿದರು.

ADVERTISEMENT

ಬಳಿಕ ಎಪಿಪಿ, ಸಿಐ, ಸಿಪಿಎಂ ಆರ್‌ಜೆಡಿ, ಎಐಎಮ್‌ಐಎಮ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಇನ್ನು ಹಲವು ಪಕ್ಷಗಳಿಗೆ ಧನ್ಯವಾದ ಸಲ್ಲಿಸಿದರು.

ಜಯದೇವ್ ಗಲ್ಲಾ ಯಾರು?
ಜಯದೇವ್ ಗಲ್ಲಾ ಅವರು ಬಹುದೊಡ್ಡ ಉದ್ಯಮಿ.ವಿದೇಶದಲ್ಲಿ ಶಿಕ್ಷಣ ಪೂರೈಸಿದ ಇವರು ಅಮರರಾಜ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಆಂಧ್ರಪ್ರದೇಶದ ಗುಂಟೂರಿನ ಸಂಸದ. ಇವರುಭಾರತದ ಉತ್ತಮ ಸಿಇಒಗಳಲ್ಲಿಕೂಡ ಒಬ್ಬರು. ಇವರ ತಾಯಿ ಅರುಣ್ ಕುಮಾರಿ ಗಲ್ಲಾ ಅವರು ಚಂದ್ರಗಿರಿ ಕ್ಷೇತ್ರದ ಮಾಜಿ ಶಾಸಕಿ.

2014ರಲ್ಲಿ ಮೊದಲ ಬಾರಿ ಲೋಕಸಭಾ ಚುನಾವಣೆ ಎದುರಿಸಿದ್ದ ಗಲ್ಲಾ ಅವರು ಚುನಾವಣಾ ಸಂದರ್ಭದಲ್ಲಿ ₹680 ಕೋಟಿಆಸ್ತಿ ಮೌಲ್ಯಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.