ADVERTISEMENT

ಅಯ್ಯೋ ರಾಮ! ನನ್ನ ನೆನಪು ಯಾರಿಗಿದೆ?: ದೇವೇಗೌಡ

ಪಿಟಿಐ
Published 26 ಡಿಸೆಂಬರ್ 2018, 1:35 IST
Last Updated 26 ಡಿಸೆಂಬರ್ 2018, 1:35 IST
ಎಚ್.ಡಿ. ದೇವೇಗೌಡ
ಎಚ್.ಡಿ. ದೇವೇಗೌಡ   

ಬೆಂಗಳೂರು: ನಾನು ಪ್ರಧಾನಿಯಾಗಿದ್ದಾಗ ಕಾಶ್ಮೀರಕ್ಕೆ ರೈಲ್ವೇ ಮಾರ್ಗ, ದೆಹಲಿ ಮೆಟ್ರೊ ಮತ್ತು ಬೋಗಿಬೀಲ್‌ ಸೇತುವೆ ಯೋಜನೆಯನ್ನು ಮಂಜೂರು ಮಾಡಿದ್ದೆ. ನಾನು ಪ್ರತೀ ಯೋಜನೆಗಳಿಗಾಗಿ ಬಜೆಟ್‍ನಲ್ಲಿ ₹100 ಕೋಟಿ ಮಂಜೂರು ಮಾಡಿ ಶಂಕುಸ್ಥಾಪನೆ ಮಾಡಿದ್ದೆ.ಜನರು ಈಗ ನನ್ನನ್ನು ಮರೆತಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ದೇಶದ ಅತ್ಯಂತ ಉದ್ದದ ರಸ್ತೆ–ರೈಲು ಸೇತುವೆ ಬೋಗಿಬೀಲ್‌ ಲೋಕಾರ್ಪಣೆ ಮಾಡಿದ್ದರು.ಈ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನಿಸಿರಲಿಲ್ಲ.ಈ ಬಗ್ಗೆ ಗೌಡರು ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ನಿಮ್ಮನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲವೇ? ಎಂದು ಪತ್ರಕರ್ತರು ಗೌಡರಲ್ಲಿ ಪ್ರಶ್ನೆ ಕೇಳಿದಾಗ, ಅಯ್ಯೋ ರಾಮ! ನನ್ನ ನೆನಪು ಯಾರಿಗಿದೆ? ಕೆಲವು ಪತ್ರಿಕೆಗಳು ನನ್ನ ಹೆಸರನ್ನು ಉಲ್ಲೇಖಿಸಿರುತ್ತವೆ ಎಂದಿದ್ದಾರೆ.

ADVERTISEMENT

ಇದನ್ನೂ ಓದಿ

ಬೋಗಿಬೀಲ್ ಸೇತುವೆ ಯೋಜನೆ ಪೂರ್ಣಗೊಳಿಸಲು ವಿಳಂಬವಾಗಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ನಾನು ವಿಭಿನ್ನ ಅಂತ ಅನಿಸುವುದು ಇಲ್ಲಿಯೇ. ನಾನು 13 ತಿಂಗಳಲ್ಲಿ ಹಾಸನ-ಮೈಸೂರು ಯೋಜನೆ ಪೂರ್ಣಗೊಳಿಸಿದ್ದೆ.ಎರಡು ಸೇತುವೆಗಳ ಯೋಜನೆಯನ್ನು ನಿಗದಿತ ಸಮಯದಲ್ಲಿ ಮುಗಿಸಿದ್ದೆ.ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅನಘವಾಡಿ ಸೇತುವೆ, ಕೃಷ್ಣ ನದಿಗೆ ನಿರ್ಮಿಸಲಾದ ಸೇತುವೆಯನ್ನು ಹೋಗಿ ನೋಡಿ. ಮುಂಬೈ ಕರ್ನಾಟಕ ಪ್ರದೇಶದ ಕೆಲವು ಜನರು ದೇವೇಗೌಡರು ಉತ್ತರ ಕರ್ನಾಟಕದ ಜನರಿಗೆ ಏನೂ ಮಾಡಿಲ್ಲ ಅಂತಾರೆ. ಹೋಗಿ ನೋಡಿ ಎಂದಿದ್ದಾರೆ ಗೌಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.