ADVERTISEMENT

2019ರಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ: ರಾಮದೇವ್

ಏಜೆನ್ಸೀಸ್
Published 26 ಡಿಸೆಂಬರ್ 2018, 3:02 IST
Last Updated 26 ಡಿಸೆಂಬರ್ 2018, 3:02 IST
ಬಾಬಾ ರಾಮದೇವ್
ಬಾಬಾ ರಾಮದೇವ್   

ಮಧುರೈ: ದೇಶದಲ್ಲಿ ಈಗಿರುವ ರಾಜಕೀಯ ಪರಿಸ್ಥಿತಿ ಜಟಿಲವಾಗಿದೆ.2019ರ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಅದೊಂದು ಜಿದ್ದಾಜಿದ್ದಿನ ಸ್ಪರ್ಧೆ ಆಗಿರುತ್ತದೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಯಾವುದೇ ವ್ಯಕ್ತಿಯ ಪರ ಅಥವಾ ವಿರೋಧ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ ರಾಮದೇವ್, ನಾನು ರಾಜಕೀಯದತ್ತ ಗಮನ ಹರಿಸುತ್ತಿಲ್ಲ ಎಂದಿದ್ದಾರೆ.

ನಮಗೆ ರಾಜಕೀಯ ಅಥವಾ ಧಾರ್ಮಿಕ ಅಜೆಂಡಾಗಳೇನೂ ಇಲ್ಲ.ಆದರೆ ನಾವು ಆಧ್ಯಾತ್ಮದ ದೇಶ ಮತ್ತು ಆಧ್ಯಾತ್ಮದ ಜಗತನ್ನು ಬಯಸುತ್ತೇವೆ.ಯೋಗ ಮತ್ತು ವೇದಾಭ್ಯಾಸಗಳಿಂದ ನಾವು ಭಾರತವನ್ನು ಅಭಿವೃದ್ಧಿಶೀಲ, ದೈವಿಕ ಮತ್ತು ಆಧ್ಯಾತ್ಮ ದೇಶವನ್ನಾಗಿ ಮಾಡುತ್ತೇವೆ.

ADVERTISEMENT

52ರ ಹರೆಯದ ರಾಮದೇವ್ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು.ವರ್ಷದ ನಂತರ ಅವರನ್ನು ಹರಿಯಾಣದ ರಾಯಭಾರಿಯನ್ನಾಗಿ ಮಾಡಿ ಸಂಪುಟ ಸಚಿವರ ದರ್ಜೆ ನೀಡಲಾಯಿತು. ಕೆಂಪುಗೂಟದ ಕಾರು, ಅಂಗರಕ್ಷಕರು ಮತ್ತು ಬೆಂಗಾವಲು ವಾಹನವನ್ನೂ ರಾಮದೇವ್ ಅವರಿಗೆ ನೀಡಲಾಗಿತ್ತು.

ರಾಮದೇವ್ ರಾಜಕೀಯದಿಂದ ದೂರವಾಗಿದ್ದು ಇದೇ ಮೊದಲ ಬಾರಿಯೇನೂ ಅಲ್ಲ.ಸೆಪ್ಟೆಂಬರ್ ತಿಂಗಳಲ್ಲಿ ಎನ್‍ಡಿಟಿವಿಆಯೋಜಿಸಿದ್ದ 'ಯುವ' ಕಾರ್ಯಕ್ರಮದಲ್ಲಿ ನೀವು ಬಿಜೆಪಿ ಪ್ರಚಾರ ಮಾಡುವಿರಾ? ಎಂದು ಪ್ರಶ್ನೆ ಕೇಳಿದಾಗ ನಾನೇಕೆ ಮಾಡಬೇಕು ಎಂದಿದ್ದರು ರಾಮದೇವ್.

ರಾಜಕೀಯದಿಂದ ದೂರವಾಗಿರುವರಾಮದೇವ್, ನಾನು ರಾಜಕೀಯದಿಂದ ಹಿಂದೆ ಸರಿದಿದ್ದೇನೆ.ನಾನು ಎಲ್ಲ ಪಕ್ಷಗಳೊಂದಿಗೆ ಇದ್ದೇನೆ ಮತ್ತು ನಾನು ಯಾವುದೇ ಪಕ್ಷಗಳೊಂದಿಗೆ ಇಲ್ಲ ಎಂದು ಒಗಟು ಮಾದರಿಯ ಉತ್ತರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.