ADVERTISEMENT

ಅದಾನಿ–ಅಂಬಾನಿ ವಿರುದ್ಧ ಕಾಂಗ್ರೆಸ್ ದಾಳಿ ನಿಂತಿದ್ದೇಕೆ?: ಪ್ರಧಾನಿ ಮೋದಿ

ಪಿಟಿಐ
Published 8 ಮೇ 2024, 11:13 IST
Last Updated 8 ಮೇ 2024, 11:13 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಹೈದರಾಬಾದ್‌: ಕಳೆದ ಐದು ವರ್ಷಗಳಿಂದ ಅಂಬಾನಿ–ಅದಾನಿಯನ್ನು ಗುರಿಯಾಗಿಸಿಕೊಂಡು ಪ್ರಶ್ನೆ ಮಾಡುತ್ತಿದ್ದ ಶೆಹಜಾದಾ(ರಾಹುಲ್‌ ಗಾಂಧಿ) ಇದೀಗ ಏಕಾಏಕಿ ಪ್ರಶ್ನಿಸುವುದನ್ನು ನಿಲ್ಲಿಸಿದ್ದಾರೆ. ಈ ಬದಲಾವಣೆಗೆ ಕಾರಣವೇನೆಂದು ಕಾಂಗ್ರೆಸ್‌ ಸ್ಪಷ್ಟಪಡಿಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ತೆಲಂಗಾಣದ ವೇಮುಲವಾಡದಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅಂಬಾನಿ–ಅದಾನಿಯನ್ನು ಗುರಿಯಾಗಿಸಿಕೊಂಡು ನಿಂದಿಸುವುದನ್ನು ಈ ಜನರು (ಕಾಂಗ್ರೆಸ್) ನಿಲ್ಲಿಸಿದ್ದಾರೆ. ತೆಲಂಗಾಣದ ಮಣ್ಣಿನಲ್ಲಿ ನಿಂತು ಕೇಳಲು ಇಷ್ಟಪಡುತ್ತೇನೆ, ಅಂಬಾನಿ–ಅದಾನಿಯಿಂದ ಎಷ್ಟು ‍ಪಡೆದುಕೊಂಡಿದ್ದಿರಿ ಎಂಬುವುದನ್ನು ರಾಜಕುಮಾರನೇ(ರಾಹುಲ್‌ ಗಾಂಧಿ) ಘೋಷಿಸಲಿ. ರಾತ್ರೋರಾತ್ರಿ ಈ ಬದಲಾವಣೆಯಾಗಲು ಕಾಂಗ್ರೆಸ್‌ ಯಾವ ಒಪ್ಪಂದಕ್ಕೆ ಬಂದಿದೆ ಎಂದೂ ಹೇಳಲಿ’ ಎಂದರು.

ADVERTISEMENT

‘ಖಂಡಿತವಾಗಿ ಇಲ್ಲೇನೊ ಅನುಮಾನವಿದೆ. ಕಳೆದ ಐದು ವರ್ಷಗಳಿಂದ ಈ ಇಬ್ಬರು ಉದ್ಯಮಿಗಳನ್ನು ನಿಂದಿಸುತ್ತಿದ್ದ ಕಾಂಗ್ರೆಸ್ ಏಕಾಏಕಿ ಪ್ರಶ್ನಿಸುವುದನ್ನು ನಿಲ್ಲಿಸಿದೆ. ಹಣ ತುಂಬಿದ ಟೆಂಪೊ ಕಾಂಗ್ರೆಸ್ ಮನೆಗೆ ತಲುಪಿದೆಯೇ? ಈ ಬಗ್ಗೆ ದೇಶದ ಜನರಿಗೆ ಕಾಂಗ್ರೆಸ್ ಉತ್ತರಿಸಬೇಕಿದೆ’ ಎಂದು ಹೇಳಿದರು.

ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಸೇರಿದಂತೆ ದೇಶದ ಪ್ರಮುಖ ಐದು ಕೈಗಾರಿಕೋದ್ಯಮಿಗಳಿಗೆ ಪ್ರಧಾನಿ ಒಲವು ತೋರುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.