ADVERTISEMENT

ಪ್ರಮುಖ ಖಾತೆ ಮುನ್ನಡೆಸಲು ತಜ್ಞರೆಂದು ಹೇಳಿಕೊಳ್ಳುವವರು ಬೇಕೆ?: ಪಿ.ಚಿದಂಬರಂ

ಸಚಿವ ಅಶ್ವಿನಿವೈಷ್ಣವ್‌ ವಿರುದ್ದ ಚಿದಂಬರಂ ವಾಗ್ದಾಳಿ

ಪಿಟಿಐ
Published 13 ಜೂನ್ 2023, 14:43 IST
Last Updated 13 ಜೂನ್ 2023, 14:43 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ‘ಪ್ರಮುಖ ಖಾತೆಗಳನ್ನು ಮುನ್ನಡೆಸಲು, ಚುನಾವಣೆಯಲ್ಲಿ ಗೆದ್ದಿರದ ಮತ್ತು ತಜ್ಞರೆಂದು ಹೇಳಿಕೊಳ್ಳುವವರು ಯಾಕೆ ಬೇಕು’ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಮಂಗಳವಾರ ಟೀಕಿಸಿದ್ದಾರೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಗುರಿಯಾಗಿಸಿ ಅವರು ಈ ವಾಗ್ದಾಳಿ ನಡೆಸಿದ್ದಾರೆ. ಒಡಿಶಾದ ಬಾಲೇಶ್ವರ ಜಿಲ್ಲೆಯಲ್ಲಿ ಸಂಭವಿಸಿದ ರೈಲು ಅಪಘಾತ ಹಾಗೂ ಕೋವಿನ್ ಪೋರ್ಟಲ್‌ನಿಂದ ಜನರ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ ಎಂಬ ಆರೋಪಗಳನ್ನು ಮುಂದಿಟ್ಟುಕೊಂಡು ಅವರು ಈ ಟೀಕೆ ಮಾಡಿದ್ದಾರೆ.

‘ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಹೊಣೆ ಹೊತ್ತಿರುವ ಅಶ್ವಿನಿ ವೈಷ್ಣವ್‌ ಅವರು ಈ ಖಾತೆಗಳನ್ನು ಹೇಗೆ ಮುನ್ನಡೆಸುತ್ತಾರೆ ಎಂಬ ಬಗ್ಗೆ ನಾನು ದಿಗಿಲುಗೊಂಡಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.