ADVERTISEMENT

ಗುಜರಾತ್ ಯುವಕರನ್ನು ಮಾದಕ ವ್ಯಸನದತ್ತ ಯಾಕೆ ದೂಡಲಾಗುತ್ತಿದೆ? ರಾಹುಲ್‌ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2022, 7:28 IST
Last Updated 1 ಆಗಸ್ಟ್ 2022, 7:28 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ    

ನವದೆಹಲಿ: ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಮಾದಕ ವಸ್ತುಗಳು ನಿರಂತರವಾಗಿ ಪತ್ತೆಯಾಗುತ್ತಿವೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಗುಜರಾತ್ ಯುವಕರನ್ನು ಮಾದಕ ವ್ಯಸನದತ್ತ ಯಾಕೆ ದೂಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸೋಮವಾರ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ ಗುಜರಾತ್‌ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಎಸೆದಿದ್ದಾರೆ.

‘ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಸೆಪ್ಟೆಂಬರ್ 21ರಂದು 3,000 ಕೆ.ಜಿ (₹ 21,000ಕೋಟಿ), ಮೇ 22 ರಂದು 56 ಕೆ.ಜಿ (₹ 500 ಕೋಟಿ), ಜುಲೈ 22ರಂದು 75 ಕೆ.ಜಿ (₹ 375 ಕೋಟಿ) ಮಾದಕ ವಸ್ತು ಪತ್ತೆಯಾಗಿದೆ. ಡ್ರಗ್ಸ್- ಮದ್ಯ ಮಾಫಿಯಾಕ್ಕೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿರುವ ಡಬಲ್ ಇಂಜಿನ್ ಸರ್ಕಾರದಲ್ಲಿ ಕುಳಿತಿರುವವರು ಯಾರು? ಗುಜರಾತ್ ಯುವಕರನ್ನು ಮಾದಕ ವ್ಯಸನದತ್ತ ಯಾಕೆ ದೂಡಲಾಗುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ADVERTISEMENT

‘ನನ್ನ ಪ್ರಶ್ನೆಗಳು: 1. ಒಂದೇ ಬಂದರಿನಲ್ಲಿ 3 ಬಾರಿ ಡ್ರಗ್ಸ್ ವಶಪಡಿಸಿಕೊಂಡರೂ, ನಿರಂತರವಾಗಿ ಅದೇ ಬಂದರಿಗೆ ಡ್ರಗ್ಸ್‌ ಹೇಗೆ ಬರುತ್ತಿದೆ? 2. ಗುಜರಾತ್‌ನಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಮಾಫಿಯಾಕ್ಕೆ ಕಾನೂನಿನ ಭಯವಿಲ್ಲವೇ? ಅಥವಾ ಇದು ಮಾಫಿಯಾ ಸರ್ಕಾರವೇ?’ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.