ADVERTISEMENT

ಆಂಧ್ರಕ್ಕೆ ವಿಶೇಷ ಸ್ಥಾನಮಾನ: ಚಂದ್ರಬಾಬು ನಾಯ್ಡು ಮೌನ ಪ್ರಶ್ನಿಸಿದ ಶರ್ಮಿಳಾ

ಪಿಟಿಐ
Published 1 ಜುಲೈ 2024, 11:35 IST
Last Updated 1 ಜುಲೈ 2024, 11:35 IST
<div class="paragraphs"><p>ವೈ.ಎಸ್‌.ಶರ್ಮಿಳಾ ಮತ್ತು&nbsp;ಎನ್‌.ಚಂದ್ರಬಾಬು ನಾಯ್ಡು</p></div>

ವೈ.ಎಸ್‌.ಶರ್ಮಿಳಾ ಮತ್ತು ಎನ್‌.ಚಂದ್ರಬಾಬು ನಾಯ್ಡು

   

ಅಮರಾವತಿ: ‘ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬೇಡಿಕೆ ಕುರಿತು ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಬಾಯಿ ಬಿಡುತ್ತಿಲ್ಲವೇಕೆ’ ಎಂದು ಆಂಧ್ರಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ವೈ.ಎಸ್‌.ಶರ್ಮಿಳಾ ಪ್ರಶ್ನಿಸಿದ್ದಾರೆ.

ಈ ವಿಚಾರದಲ್ಲಿ ತಮ್ಮ ಸುದೀರ್ಘ ಮೌನಕ್ಕೆ ಕಾರಣವೆನೆಂದು ಮುಖ್ಯಮಂತ್ರಿಗಳು ಜನತೆಗೆ ತಿಳಿಸಬೇಕು ಎಂದು ಶರ್ಮಿಳಾ ಒತ್ತಾಯಿಸಿದ್ದಾರೆ.

ADVERTISEMENT

‘ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಬೇಡಿಕೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ. ಆದರೆ, ಚಂದ್ರಬಾಬು ನಾಯ್ಡು ಅವರು ಈ ಬಗ್ಗೆ ಬಾಯಿ ಬಿಡುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.

‘ಬಂಡವಾಳವಿಲ್ಲದ ಆಂಧ್ರಪ್ರದೇಶವು ಬಿಹಾರಕ್ಕಿಂತ ಹಿಂದುಳಿದಿದೆ ಎಂಬ ವಿಷಯ ಅವರಿಗೆ(ಚಂದ್ರಬಾಬು ನಾಯ್ಡು) ತಿಳಿದಿದೆ ಎಂದು ಭಾವಿಸುತ್ತೇನೆ’ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

‘ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದರೆ ಮೈತ್ರಿಯಿಂದ ಹೊರನಡೆಯುವುದಾಗಿ ಚಂದ್ರಬಾಬು ನಾಯ್ಡು ಅವರು ಯಾಕೆ ಬೆದರಿಕೆ ಹಾಕುತ್ತಿಲ್ಲ ಎಂಬುವುದೂ ಅಚ್ಚರಿಯಾಗಿದೆ’ ಎಂದು ಶರ್ಮಿಳಾ ಹೇಳಿದ್ದಾರೆ.

18ನೇ ಲೋಕಸಭಾ ಅಧಿವೇಶನ ಪ್ರಾರಂಭವಾದ ಮೂರೇ ದಿನಕ್ಕೆ ಎನ್‌ಡಿಎ ಮಿತ್ರಪಕ್ಷ ಜೆಡಿ(ಯು) ಬಿಹಾರಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.