ADVERTISEMENT

ಜಾತಿ ಗಣತಿ ನಡೆಸುವಂತೆ ಬಿಜೆಪಿ, ಆರ್‌ಎಸ್‌ಎಸ್ ಮೇಲೆ ಒತ್ತಡ: ಲಾಲು ಪ್ರಸಾದ್

ಪಿಟಿಐ
Published 3 ಸೆಪ್ಟೆಂಬರ್ 2024, 10:34 IST
Last Updated 3 ಸೆಪ್ಟೆಂಬರ್ 2024, 10:34 IST
<div class="paragraphs"><p>ಲಾಲು ಪ್ರಸಾದ್</p></div>

ಲಾಲು ಪ್ರಸಾದ್

   

ಪಟ್ನಾ: ಜಾತಿ ಗಣತಿ ಕುರಿತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಆರ್‌ಜೆಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್‌, ಜಾತಿ ಗಣತಿ ನಡೆಸುವಂತೆ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಒತ್ತಡವನ್ನು ಹೇರಲಿವೆ ಎಂದು ಹೇಳಿದ್ದಾರೆ.

ಜಾತಿ ಗಣತಿಯಿಂದ ಸಂಗ್ರಹಿಸಿದ ದತ್ತಾಂಶವನ್ನು ರಾಜಕೀಯ ಕಾರಣಕ್ಕೆ ಬಳಸದೇ, ಹಿಂದುಳಿದವರ ಕಲ್ಯಾಣಕ್ಕಾಗಿ ಬಳಸಿದರೆ ಮಾತ್ರ ಜಾತಿ ಗಣತಿಯನ್ನು ಬೆಂಬಲಿಸುವುದಾಗಿ ಆರ್‌ಎಸ್‌ಎಸ್‌ ಹೇಳಿದ ಬೆನ್ನಲ್ಲೇ ಲಾಲು ಪ್ರಸಾದ್‌ ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಜಾತಿ ಗಣತಿ ನಡೆಸದಿರಲು ಬಿಜೆಪಿಗೆ ಯಾವ ಅಧಿಕಾರವಿದೆ?, ನಾವು ಅವರ ಮೇಲೆ ತೀವ್ರ ಒತ್ತಡ ಹೇರುತ್ತೇವೆ, ಅವರು ಜಾತಿ ಗಣತಿ ನಡೆಸಲೇಬೇಕು. ದಲಿತರು, ಹಿಂದುಳಿದವರು, ಆದಿವಾಸಿಗಳು ಮತ್ತು ಬಡವರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಸಮಯ ಬಂದಿದೆ’ ಎಂದು ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಕೇಂದ್ರ ಮತ್ತು ರಾಜ್ಯದಲ್ಲಿರುವ ಎನ್‌ಡಿಎ ಸರ್ಕಾರ ಸಮಾಜದ ಶೋಷಿತ ವರ್ಗಕ್ಕೆ ಮೀಸಲಾತಿ ಕಲ್ಪಿಸಲು ಮತ್ತು ಜಾತಿ ಗಣತಿ ನಡೆಸಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.