ಶ್ರೀನಗರ: ಕಣಿವೆ ಪ್ರದೇಶದಲ್ಲಿ ನಮ್ಮ ಭದ್ರತಾ ಪಡೆಗಳು ಜಾಗರೂಕವಾಗಿದ್ದು, ತಾಲಿಬಾನ್ ಸೇರಿದಂತೆ ಎಲ್ಲ ಬಗೆಯ ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಜ್ಜಾಗಿವೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಶನಿವಾರ ತಿಳಿಸಿದರು.
ಪುಲ್ವಾಮ ಜಿಲ್ಲೆಯ ಅವಂತಿಪೋರಾ ಪ್ರದೇಶದ ಸೇನೆಯ ವಿಕ್ಟರ್ ಫೋರ್ಸ್‌ನ ಪ್ರಧಾನ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಜನರ ಸಹಕಾರವೂ ಅಗತ್ಯವಿದೆ ಎಂದರು.
‘ನಾವು ಎಲ್ಲಾ ಸವಾಲುಗಳನ್ನು ವೃತ್ತಿಪರ ರೀತಿಯಲ್ಲಿ ನಿಭಾಯಿಸುತ್ತೇವೆ ಮತ್ತು ಸಂಪೂರ್ಣವಾಗಿ ಜಾಗರೂಕರಾಗಿರುತ್ತೇವೆ’ ಎಂದು ಅವರು ಪ್ರತಿಕ್ರಿಯಿಸಿದರು.
‘ಸಮಾಜಕ್ಕೆ ಹಾನಿ ಮಾಡುವ ಉಗ್ರರು, ಆತ್ಮಾಹುತಿ ಬಾಂಬರ್‌ಗಳು, ಐಇಡಿಗಳನ್ನು ಸ್ಥಾಪಿಸಲು ಯೋಜಿಸುವವರ ಬಗ್ಗೆಸಾರ್ವಜನಿಕರಿಗೆ ಗೊತ್ತಿದ್ದರೆ ಕೂಡಲೇ ಮಾಹಿತಿ ಹಂಚಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.