ADVERTISEMENT

ನ್ಯಾಯಾಲಯ ಕಲಾಪ ನೇರಪ್ರಸಾರಕ್ಕೆ ಸ್ವಂತ ವೇದಿಕೆ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 11:12 IST
Last Updated 26 ಸೆಪ್ಟೆಂಬರ್ 2022, 11:12 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ವಿಚಾರಣೆಯ ಕಲಾಪಗಳ ನೇರಪ್ರಸಾರಕ್ಕೆ ಸ್ವಂತ ವೇದಿಕೆಗಳನ್ನು ಹೊಂದಿದ್ದು, ಈಗ ಯೂಟ್ಯೂಬ್‌ನಲ್ಲಿ ಆಗುತ್ತಿರುವ ಕಲಾಪದ ನೇರ ಪ್ರಸಾರ ತಾತ್ಕಾಲಿಕ’ ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.

ಯೂಟ್ಯೂಬ್‌ನಂತಹ ಖಾಸಗಿ ಸಾಮಾಜಿಕ ಜಾಲತಾಣಗಳಿಗೆ ಉನ್ನತ ನ್ಯಾಯಾಲಯದ ವಿಚಾರಣೆಯ ಹಕ್ಕುಸ್ವಾಮ್ಯ ಒಪ್ಪಿಸಬಾರದು ಎಂದು ಬಿಜೆಪಿ ನಾಯಕ ಕೆ.ಎನ್‌. ಗೋವಿಂದಾಚಾರ್ಯ ಅವರ ವಕೀಲರು ವಾದಿಸಿದಾಗ,ಮುಖ್ಯನ್ಯಾಯಮೂರ್ತಿ ಯು.ಯು. ಲಲಿತ್‌, ಎಸ್‌. ರವಿಂದ್ರ ಭಟ್‌ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದಪೀಠವು ಸ್ವಂತ ವಾಹಿನಿ ಹೊಂದಲಿದೆ ಎಂದು ಮಾಹಿತಿ ನೀಡಿತು.

2018ರ ತೀರ್ಪು ಉಲ್ಲೇಖಿಸಿ, ಈ ನ್ಯಾಯಾಲಯದಲ್ಲಿ ದಾಖಲಾದ ಮತ್ತು ಪ್ರಸಾರವಾಗುವ ಎಲ್ಲ ವಿಷಯಗಳ ಮೇಲಿನ ಹಕ್ಕುಸ್ವಾಮ್ಯವು ಈ ನ್ಯಾಯಾಲಯಕ್ಕೇ ಮಾತ್ರ ಇರಬೇಕು. ಆದರೆ, ಯುಟ್ಯೂಬ್‌ ಜಾಲತಾಣವುಕಲಾಪ ನೇರ ಪ್ರಸಾರದ ಹಕ್ಕುಸ್ವಾಮ್ಯವನ್ನು ಸ್ಪಷ್ಟವಾಗಿ ಕೇಳಿದೆ ಎಂದು ವಕೀಲವಿರಾಗ್ ಗುಪ್ತಾ ಅವರು ಪೀಠಕ್ಕೆ ತಿಳಿಸಿದರು.

ADVERTISEMENT

ಗೋವಿಂದಾಚಾರ್ಯ ಅವರು ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಅ.17ಕ್ಕೆ ನಡೆಸಲು ಪಟ್ಟಿಮಾಡಿದ ಪೀಠವು,‘ಇವು ಆರಂಭಿಕ ಹಂತಗಳು. ಕಲಾಪದ ನೇರ ಪ್ರಸಾರಕ್ಕೆ ನಾವು ಖಂಡಿತವಾಗಿಯೂ ನಮ್ಮದೇ ಆದ ಪ್ರಸಾರ ವೇದಿಕೆಗಳನ್ನು ಹೊಂದಿದ್ದೇವೆ.ಹಕ್ಕುಸ್ವಾಮ್ಯ ವಿಷಯದ ಬಗ್ಗೆ ನಾವುನೋಡಿಕೊಳ್ಳುತ್ತೇವೆ’ ಎಂದು ತ್ರಿಸದಸ್ಯ ಪೀಠ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.