ಮಥುರಾ: ಮಥುರಾದಲ್ಲಿ ಕೃಷ್ಣ ದೇವಾಲಯವನ್ನು ಕಟ್ಟಲು ಸಾಧ್ಯವಾಗದಿದ್ದರೆ, ಪಾಕಿಸ್ತಾನದ ಲಾಹೋರ್‌ನಲ್ಲಿ ನಿರ್ಮಿಸುತ್ತೇವೆ ಎಂದು ಉತ್ತರ ಪ್ರದೇಶದ ಶಾಸಕ ಲಕ್ಷ್ಮಿ ನಾರಾಯಣ್ ಚೌಧರಿ ಹೇಳಿದ್ದಾರೆ.
ದೇವಾಲಯದ ಸ್ಥಳವಾಗಿರುವ ಮಥುರಾದಲ್ಲಿ ಔರಂಗಾಜೇಬ್ ಕಾಲದಲ್ಲಿ ಹಲವು ಮಸೀದಿಗಳನ್ನು ನಿರ್ಮಿಸಲಾಗಿದೆ ಎನ್ನಲಾಗಿದ್ದು, ಈ ವಿಚಾರವಾಗಿ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ದೇವಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಚೌಧರಿ,ಶಾಹಿ ಈದ್ಗಾ ಮಸೀದಿ ಸೇರಿದಂತೆ ಕಾನ್ಸ್ ಕಿಲಾವರೆಗಿನ ಪೂರ್ಣ ಜಾಗದಲ್ಲಿ ಕಟ್ಟಿದರಷ್ಟೇ ಕೃಷ್ಣ ಮಂದಿರ ನಿರ್ಮಾಣ ಪೂರ್ಣಗೊಳ್ಳುವುದು ಎಂದು ಪ್ರತಿಪಾದಿಸಿದ್ದಾರೆ.
‘ಶಿಥಿಲಗೊಂಡಿರುವ ಕಾನ್ಸ್ ಕಿಲಾದ ಗೋಡೆಯವರೆಗೂ ದೇವಾಲಯ ಪ್ರದೇಶವನ್ನು ವಿಸ್ತರಿಸಬೇಕು. ಒಂದುವೇಳೆ ದೇವಾಲಯವನ್ನು ಮಥುರಾದಲ್ಲಿ ನಿರ್ಮಿಸಲಾಗದಿದ್ದರೆ, ಲಾಹೋರ್‌ನಲ್ಲಿ ಕಟ್ಟುತ್ತೇವೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೃಷ್ಣ ಜನ್ಮಭೂಮಿ ವಿವಾದ: ಮಸೀದಿ ತೆರವು ಕೋರಿ ಅರ್ಜಿ
ಕೃಷ್ಣ ದೇವಾಲಯದ ಪಕ್ಕದಲ್ಲಿರುವಈದ್ಗಾದಲ್ಲಿ ಭಗವಾನ್ ಕೃಷ್ಣನ ಪ್ರತಿಮೆ ಪ್ರತಿಷ್ಠಾಪನೆ ಮತ್ತು ಜಲಾಭಿಷೇಕ ನೆರವೇರಿಸಲು ಅಖಿಲ ಭಾರತ ಹಿಂದೂ ಮಹಾಸಭಾಗೆ ಡಿ.6ರಂದು ಅನುಮತಿ ನಿರಾಕರಿಸಲಾಗಿತ್ತು.
ಜಿಲ್ಲಾಡಳಿತವು ನವೆಂಬರ್ 28ರಿಂದಲೇ ಸಿಆರ್‌ಪಿಸಿ ಸೆಕ್ಷನ್ 144 ಜಾರಿಗೊಳಿಸಿದೆ.
ಏತನ್ಮಧ್ಯೆ, ಉತ್ತರ ಪ್ರದೇಶ ಸಚಿವ ಆನಂದ್ ಸ್ವರೂಪ್ ಶುಕ್ಲಾ, ಮುಸ್ಲಿಂ ಸಮುದಾಯದವರು ಮುಂದೆ ಬಂದು ಶ್ರೀ ಕೃಷ್ಣ ಜನ್ಮಭೂಮಿ ಮಥುರಾದಲ್ಲಿರುವ 'ಶ್ವೇತ ಭವನ'ವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದು ಹೇಳಿದ್ದರು.
ಕಾಶಿ ಮತ್ತು ಮಥುರಾದಲ್ಲಿರುವ ಮುಸ್ಲಿಂ ಧಾರ್ಮಿಕ ಕಟ್ಟಡಗಳನ್ನುದ್ದೇಶಿಸಿ, 'ಹಿಂದೂಗಳಿಗೆ ನೋವುಂಟು ಮಾಡಿರುವ ಶ್ವೇತ ಭವನವನ್ನು ತೆರವುಗೊಳಿಸುವ ಸಮಯ ಬರಲಿದೆ. ಭಾರತದಲ್ಲಿರುವ ಮುಸ್ಲಿಮರು, ತಮ್ಮ ಪೂರ್ವಜರಾದ ಬಾಬರ್, ಅಕ್ಬರ್ ಮತ್ತು ಔರಂಗಾಜೇಬ್, ದೇಶದಲ್ಲಿನ ರಾಮ ಮತ್ತು ಕೃಷ್ಣ ದೇವಾಲಯದ ಮೇಲಿನ ದಾಳಿಕೋರರು ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಡಾ. ರಾಮ ಮನೋಹರ ಲೋಹಿಯ ಹೇಳಿದ್ದಾರೆ. ಅವರಿಂದ (ದಾಳಿಕೋರರಿಂದ) ನಿರ್ಮಾಣವಾದ ಯಾವುದೇ ಕಟ್ಟಡಗಳೊಂದಿಗೆಒಡನಾಟ ಬೆಳೆಸಿಕೊಳ್ಳಬೇಡಿ' ಎಂದು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.