ADVERTISEMENT

ದೇಶದ ಎಲ್ಲಾ ರೈಲು ಮಾರ್ಗಗಳಲ್ಲೂ ‘ಕವಚ’ ರಕ್ಷೆ: ಅಶ್ವಿನಿ ವೈಷ್ಣವ್

ಪಿಟಿಐ
Published 1 ಆಗಸ್ಟ್ 2024, 13:49 IST
Last Updated 1 ಆಗಸ್ಟ್ 2024, 13:49 IST
ಅಶ್ವಿನಿ ವೈಷ್ಣವ್‌ –ಪಿಟಿಐ ಚಿತ್ರ
ಅಶ್ವಿನಿ ವೈಷ್ಣವ್‌ –ಪಿಟಿಐ ಚಿತ್ರ   

ನವದೆಹಲಿ: ರೈಲುಗಳ ಅಪಘಾತ ತ‍‍ಪ್ಪಿಸಲು ಅಭಿವೃದ್ಧಿಪಡಿಸಿರುವ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಯಾದ ‘ಕವಚ’ವನ್ನು ದೇಶದ ಎಲ್ಲಾ ರೈಲು ಮಾರ್ಗಗಳಲ್ಲೂ ಅಳವಡಿಸಲು ಸರ್ಕಾರ ಕ್ರಮವಹಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

ಲೋಕಸಭೆಯಲ್ಲಿ ಗುರುವಾರ ರೈಲ್ವೆ ಇಲಾಖೆಗೆ ₹7.89 ಲಕ್ಷ ಕೋಟಿ ಮೊತ್ತದ ಅನುದಾನಕ್ಕೆ ಅನುಮೋದನೆ ನೀಡಿದ ಬಳಿಕ ಮಾತನಾಡಿದ ಅವರು, ‘ದೇಶದಲ್ಲಿ 58 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಒಂದು ಕಿ.ಮೀ.ಗೂ ಸ್ವಯಂ ಚಾಲಿತ ಸುರಕ್ಷತಾ ವ್ಯವಸ್ಥೆ ಅಳವಡಿಸಲಿಲ್ಲ’ ಎಂದು ದೂರಿದರು.

‘ಪ್ರಯಾಣಿಕರ ಅನುಕೂಲಕ್ಕಾಗಿ ಯಾವುದೇ ಕ್ರಮಕೈಗೊಳ್ಳಲಿಲ್ಲ. ರೈಲ್ವೆಯಲ್ಲಿ ಹಲವು ಪ್ರಯೋಗ ಕೈಗೊಂಡರೂ ಯಾವುದೇ ಫಲಪ್ರದವಾಗಲಿಲ್ಲ’ ಎಂದರು.

ADVERTISEMENT

ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಮಾನವರಹಿತ ರೈಲ್ವೆ ಲೆವಲ್ ಕ್ರಾಸಿಂಗ್‌ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. ರೈಲ್ವೆ ನಿಲ್ದಾಣಗಳ ನಡುವೆ ಎಲೆಕ್ಟ್ರಾನಿಕ್‌ ಇಂಟರ್‌ ಲಿಂಕಿಂಗ್‌ ವ್ಯವಸ್ಥೆ ಅಳವಡಿಸಲಾಗಿದೆ. ಇದು ರೈಲುಗಳ ಸುಗಮ ಸಂಚಾರಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಆದರೆ, ‘ಕವಚ’ ವ್ಯವಸ್ಥೆ ಅಳವಡಿಕೆ ಸಂಬಂಧ ಸಚಿವರು ಕಾಲಮಿತಿಯ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.