ADVERTISEMENT

ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದ ವ್ಯಕ್ತಿ ಪೌರತ್ವ ಪಡೆದರೆ ರಾಜೀನಾಮೆ: ಅಸ್ಸಾಂ ಸಿಎಂ

ಪಿಟಿಐ
Published 12 ಮಾರ್ಚ್ 2024, 6:25 IST
Last Updated 12 ಮಾರ್ಚ್ 2024, 6:25 IST
<div class="paragraphs"><p>ಹಿಮಂತ ಬಿಸ್ವಾ ಶರ್ಮಾ</p></div>

ಹಿಮಂತ ಬಿಸ್ವಾ ಶರ್ಮಾ

   

(ಪಿಟಿಐ ಚಿತ್ರ)

ಗುವಾಹಟಿ: ರಾಷ್ಟ್ರೀಯ ಪೌರತ್ವ ನೋಂದಣಿಗೆ(ಎನ್‌ಆರ್‌ಸಿ) ಅರ್ಜಿ ಸಲ್ಲಿಸದ ವ್ಯಕ್ತಿಯೊಬ್ಬರು ಪೌರತ್ವ ಪಡೆದರೆ ಮೊದಲು ನಾನೇ ರಾಜೀನಾಮೆ ನೀಡಲಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ಹೇಳಿದ್ದಾರೆ.

ADVERTISEMENT

'ಪೌರತ್ವ ತಿದ್ದುಪಡಿ ಕಾಯ್ದೆ'ಯು (ಸಿಎಎ) ಜಾರಿಗೆ ಬಂದಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಘೋಷಿಸಿತ್ತು. ಯಾವುದೇ ದಾಖಲೆಗಳು ಇಲ್ಲದೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತ ಪ್ರವೇಶಿಸಿದ ಮುಸ್ಲಿಮೇತರರಿಗೆ ಭಾರತದ ಪೌರತ್ವವನ್ನು ಈ ಕಾಯ್ದೆಯು ನೀಡುತ್ತದೆ.

ಸಿಎಎ ವಿರೋಧಿಸಿ ಪ್ರತಿಭಟನಾಕಾರರು, ಈ ಕಾಯ್ದೆ ಜಾರಿಗೆ ಬಂದರೆ ಲಕ್ಷಾಂತರ ಮಂದಿ ರಾಜ್ಯಕ್ಕೆ ಬರುತ್ತಾರೆ ಎಂದು ಆರೋಪಿಸಿದ್ದಾರೆ.

ಹಾಗೇ ಆದ್ದಲ್ಲಿ ನಾನೇ ಮೊದಲು ಪ್ರತಿಭಟಿಸುತ್ತೇನೆ. ನಾನು ಅಸ್ಸಾಂನ ಮಗನಾಗಿದ್ದು, ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದ ವ್ಯಕ್ತಿ ಪೌರತ್ವ ಪಡೆದ್ದಲ್ಲಿ ನಾನೇ ಮೊದಲು ರಾಜೀನಾಮೆ ನೀಡಲಿದ್ದೇನೆ ಎಂದು ಹೇಳಿದ್ದಾರೆ.

ಸಿಎಎಯಲ್ಲಿ ಹೊಸತೇನಿಲ್ಲ. ಈಗ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸುವ ಸಮಯ ಬಂದಿದೆ. ಪೋರ್ಟಲ್‌ನ ಅಂಕಿಅಂಶವು ಕಾಯ್ದೆಯನ್ನು ವಿರೋಧಿಸುವವರ ವಾದ ಸರಿಯೇ ಅಥವಾ ತಪ್ಪೇ ಎಂಬುದು ಸ್ಪಷ್ಟವಾಗಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.