ADVERTISEMENT

ಸೋಲು–ಗೆಲುವು ಸಹಜ | ಇರಾನಿ ಬಗ್ಗೆ ‘ಅವಹೇಳನ’ ಬೇಡ: ಬೆಂಬಲಿಗರಿಗೆ ರಾಹುಲ್ ಮನವಿ

ಪಿಟಿಐ
Published 12 ಜುಲೈ 2024, 10:47 IST
Last Updated 12 ಜುಲೈ 2024, 10:47 IST
<div class="paragraphs"><p>ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ </p></div>

ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ

   

– ಪಿಟಿಐ ಚಿತ್ರ

ನವದೆಹಲಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಅಥವಾ ಇತರ ಯಾವುದೇ ನಾಯಕರ ಬಗ್ಗೆ ಅವಹೇಳನಕಾರಿ ಭಾಷೆ ಬಳಸುವುದು ಮತ್ತು ಅವರೊಂದಿಗೆ ಕೆಟ್ಟದಾಗಿ ವರ್ತಿಸುವುದನ್ನು ನಿಲ್ಲಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮನವಿ ಮಾಡಿದ್ದಾರೆ.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ಎದುರು ಸೋತಿದ್ದ ಇರಾನಿ ಅವರು ಈಚೆಗೆ ನವದೆಹಲಿಯ ತಮ್ಮ ಸರ್ಕಾರಿ ನಿವಾಸವನ್ನು ಖಾಲಿ ಮಾಡಿದ್ದರು. ಅದನ್ನು ಉಲ್ಲೇಖಿಸಿ ಕೆಲವರು ಸ್ಮೃತಿ ಅವರನ್ನು ಕೆಣಕಿದ್ದರು. ಈ ಬೆಳವಣೆಗೆಯ ಬೆನ್ನಲ್ಲೇ ರಾಹುಲ್‌ ಹೇಳಿಕೆ ಹೊರಬಿದ್ದಿದೆ. 

‘ಜೀವನದಲ್ಲಿ ಸೋಲು–ಗೆಲುವು ಸಾಮಾನ್ಯ. ಜನರನ್ನು ಅವಮಾನಿಸುವುದು ಮತ್ತು ಅವಹೇಳನ ಮಾಡುವುದು ದೌರ್ಬಲ್ಯದ ಸಂಕೇತವೇ ಹೊರತು ಅದು ಶಕ್ತಿಯಲ್ಲ’ ಎಂದು ಕಾಂಗ್ರೆಸ್‌ ನಾಯಕ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

2019ರ ಚುನಾವಣೆಯಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಮಣಿಸಿದ್ದ ಸ್ಮೃತಿ, ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯ ಎದುರು 1.6 ಲಕ್ಷಕ್ಕೂ ಅಧಿಕ ಮತಗಳಿಂದ ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.