ADVERTISEMENT

ನಾಳೆ ಕಾಂಗ್ರೆಸ್‌ನಿಂದ ‘ದೆಹಲಿ ನ್ಯಾಯ ಯಾತ್ರೆ’

ಪಿಟಿಐ
Published 7 ನವೆಂಬರ್ 2024, 13:39 IST
Last Updated 7 ನವೆಂಬರ್ 2024, 13:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರ ಮರು ಸ್ಥಾಪಿಸಲು ಪಣತೊಟ್ಟಿರುವ ಕಾಂಗ್ರೆಸ್‌, ಭಾರತ್ ಜೋಡೊ ನ್ಯಾಯ ಯಾತ್ರೆ ಮಾದರಿಯಲ್ಲಿಯೇ ‘ದೆಹಲಿ ನ್ಯಾಯ ಯಾತ್ರೆ’ ಪ್ರಾರಂಭಿಸಿದೆ. ನಾಳೆ ರಾಜ್‌ಘಾಟ್‌ನಲ್ಲಿ ಯಾತ್ರೆಗೆ ಚಾಲನೆ ದೊರಕಲಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಕೆ.ಸಿ.ವೇಣುಗೋಪಾಲ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರನ್ನು ಯಾತ್ರೆಗೆ ‍ಆಹ್ವಾನಿಸಲಾಗಿದೆ ಎಂದು ದೆಹಲಿ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಯಾದವ್ ತಿಳಿಸಿದರು.

ADVERTISEMENT

ಯಾತ್ರೆಯ ವೇಳೆ ನಗರದ ಜನರೊಂದಿಗೆ ಪಕ್ಷದ ನಾಯಕರು ಸಂವಹನ ನಡೆಸಲಿದ್ದು, ಕಳೆದ 10 ವರ್ಷಗಳಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲಿದ್ದೇವೆ ಎಂದು ಯಾದವ್ ಹೇಳಿದರು.

ನಾಳೆ(ನವೆಂಬರ್ 8) ರಾಜ್‌ಘಾಟ್‌ನಿಂದ ಪ್ರಾರಂಭವಾಗುವ ಯಾತ್ರೆಯು ಎಲ್ಲಾ 70 ವಿಧಾನಸಭಾ ಕ್ಷೇತ್ರಗಳನ್ನು ಹಾದು ಡಿಸೆಂಬರ್ 4ರಂದು ತಿಮಾರ್‌ಪುರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

ಯಾತ್ರೆಯು ನಾಲ್ಕು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಸುಮಾರು16 ಕ್ಷೇತ್ರಗಳಲ್ಲಿ ಸಾಗಲಿದೆ. ಎರಡನೇ ಹಂತದಲ್ಲಿ(ನ.15ರಿಂದ ನ.20) 18 ಕ್ಷೇತ್ರಗಳನ್ನು, ಮೂರನೇ ಹಂತದಲ್ಲಿ(ನ.22ರಿಂದ ನ.27) 16 ಕ್ಷೇತ್ರಗಳನ್ನು ಪೂರ್ಣಗೊಳಿಸಲಾಗುತ್ತದೆ. ನಾಲ್ಕನೇ ಹಂತದಲ್ಲಿ(ನವೆಂಬರ್ 29ರಿಂದ ಡಿಸೆಂಬರ್ 4) 20 ಕ್ಷೇತ್ರಗಳಲ್ಲಿ ಯಾತ್ರೆ ಸಾಗುತ್ತದೆ ಎಂದು ಮಾಹಿತಿ ನೀಡಿದರು.

ಯಾತ್ರೆಯಲ್ಲಿ ಸುಮಾರು 250ರಿಂದ 300 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.