ADVERTISEMENT

ನವದೆಹಲಿ ಮೆಟ್ರೋ ಸ್ಟೇಷನ್ ಬಳಿ ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ಗೆ ಗುಂಡಿಟ್ಟು ಹತ್ಯೆ

ಪಿಟಿಐ
Published 8 ಫೆಬ್ರುವರಿ 2020, 6:09 IST
Last Updated 8 ಫೆಬ್ರುವರಿ 2020, 6:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಹಿಳಾ ಸಬ್‌ ಇನ್‌ಸ್ಪೆಕ್ಟರ್ ಅನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನವದೆಹಲಿಯ ರೋಹಿಣಿ ಪೂರ್ವ ಮೆಟ್ರೋ ಸ್ಟೇಷನ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಪ್ರತಾಪ್‌ಗಂಜ್ ಪ್ರದೇಶದ ಕೈಗಾರಿಕಾ ಪ್ರದೇಶದ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದ್ದ 26 ವರ್ಷದ ಪ್ರೀತಿ ಅಹ್ಲಾವತ್‌ ಎಂಬವರಿಗೆದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.ರಾತ್ರಿ 9.30 ಸುಮಾರಿಗೆ ಮಾಹಿತಿ ಲಭ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಶಂಕಿತರನ್ನು ಗುರುತಿಸಿದ್ದೇವೆ ಮತ್ತು ಸುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಎಸ್.ಡಿ. ಮಿಶ್ರಾ ತಿಳಿಸಿದ್ದಾರೆ.

ADVERTISEMENT

ಸ್ಥಳದಲ್ಲಿ ಮೂರು ಖಾಲಿ ಕಾರ್ಟ್ರಿಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆಎಂದು ಪೊಲೀಸರು ತಿಳಿಸಿದ್ದಾರೆ.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. 2018ರಲ್ಲಿ ಪ್ರೀತಿ ದೆಹಲಿ ಪೊಲೀಸ್​ ಪಡೆ ಸೇರಿದ್ದರು.

ಇಂದು ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಫಲಿತಾಂಶ ಫೆಬ್ರುವರಿ 11ಕ್ಕೆ ಪ್ರಕಟವಾಗಲಿದೆ. ಅದಕ್ಕೂ ಮೊದಲು ಈ ಗುಂಡಿನ ದಾಳಿ ನಡೆದಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.