ಮುಂಬೈ: ಮಹಾರಾಷ್ಟ್ರದ ಥಾಣೆಯ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ವೈದ್ಯರಲ್ಲಿ ಮನವಿ ಮಾಡಿಕೊಂಡು ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಮುಹೂರ್ತದಲ್ಲೇ ಹೆರಿಗೆ ಮಾಡಿಸಿಕೊಂಡು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಮೊದಲು ಹೆರಿಗೆ ದಿನಾಂಕವನ್ನು 23ಕ್ಕೆ ನೀಡಲಾಗಿತ್ತು. ಬಳಿಕ, ಮಹಿಳೆ ಮನವಿ ಮೇರೆಗೆ ರಾಮನ ಪ್ರಾಣ ಪ್ರತಿಷ್ಠಾಪನೆಯ ಶುಭ ಮುೂರ್ತದಲ್ಲಿ ಒಂದು ದಿನ ಮೊದಲೇ ಹೆರಿಗೆ ಮಾಡಲಾಗಿತು. ಮಹಿಳೆಯು ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಸೇರಿಯನ್ ಮಾಡಿದ ಆಸ್ಪತ್ರೆಯ ವೈದ್ಯ ಡಾ.ಚಂದ್ರಕಾಂತ್ ಬರೂರೆ ತಿಳಿಸಿದ್ದಾರೆ.
ಥಾಣೆಯ ನೌಪದಾ ನಿವಾಸಿಯಾಗಿರುವ ಸಮೃದ್ಧಿ ಬಾಮನೆ ಎಂಬ ಮಹಿಳೆ ಐವಿಎಫ್ ಚಿಕಿತ್ಸೆ ಮೂಲಕ ಗರ್ಭ ಧರಿಸಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಮಗುವಿನ ಜನನವಾಗಿದ್ದು, ಮಗು ಮತ್ತು ತಾಯಿ ಇಬ್ಬರೂ ಕ್ಷೇಮವಾಗಿದ್ದಾರೆ ಎಂದು ಅವರು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ಸಮಯ ಹೊಂದಿಕೆಯಾಗುವಂತೆ ರಾಷ್ಟ್ರವ್ಯಾಪಿ ಅನೇಕರು 'ಮುಹೂರ್ತದ ಹೆರಿಗೆ'ಯನ್ನು ಮಾಡಿಸಿಕೊಂಡಿದ್ದಾರೆ ಎನ್ನುತ್ತಿವೆ ವರದಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.