ADVERTISEMENT

ರೀಲ್ಸ್‌ ಮಾಡಲು ಹೋಗಿ ಪ್ರಾಣ ಬಿಟ್ಟ ಯುವತಿ

ಪಿಟಿಐ
Published 18 ಜೂನ್ 2024, 11:15 IST
Last Updated 18 ಜೂನ್ 2024, 11:15 IST
<div class="paragraphs"><p>ಪ್ರಪಾತಕ್ಕೆ ಉರುಳಿದ ಕಾರು</p></div>

ಪ್ರಪಾತಕ್ಕೆ ಉರುಳಿದ ಕಾರು

   

ಬೆಳಗಾವಿ: ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಸುಲಿಭಂಜನ್‌ ಗ್ರಾಮದಲ್ಲಿ ಯುವತಿಯೊಬ್ಬರು ಕಾರ್‌ ಹಿಂದಕ್ಕೆ ಚಲಿಸಿ ರೀಲ್ಸ್‌ ಮಾಡುತ್ತಿದ್ದ ವೇಳೆ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದಾರೆ. ಅಪಘಾತದ ವಿಡಿಯೊ ತುಣುಕುಗಳು ಜಿಲ್ಲೆಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಮೃತ ಯುವತಿ ಹೆಸರು ಶ್ವೇತಾ (25) ಎಂದು ಗೊತ್ತಾಗಿದೆ. ಶ್ವೇತಾ ತಮ್ಮ ಮೂವರು ಸ್ನೇಹಿತರ ಜತೆಗೆ ಸೋಮವಾರ ಸುಲಿಭಂಜನ್ ಗ್ರಾಮದ ದತ್ತ ಮಂದಿರಕ್ಕೆ ತೆರಳಿದ್ದರು. ಈ ವೇಳೆ ಕಾರನ್ನು ಹಿಂದಕ್ಕೆ ಓಡಿಸಿ ಬೆಟ್ಟದ ತುದಿಗೆ ನಿಲ್ಲಿಸಿ ರೀಲ್ಸ್‌ ಮಾಡಲು ಮುಂದಾದರು. ಸ್ನೇಹಿತರು ಹೊರಗೆ ನಿಂತು ಚಿತ್ರೀಕರಣ ಮಾಡುತ್ತಿದ್ದಾಗ ಶ್ವೇತಾ ಕಾರನ್ನು ಹಿಮ್ಮುಖ ಓಡಿಸಿದರು. ಬೆಟ್ಟದ ತುದಿಗೆ ಬಂದಾಗ ಕಾರ್‌ ನಿಲ್ಲಿಸುವಂತೆ ಸ್ನೇಹಿತರು ಕೂಗಿದರೂ ಶ್ವೇತಾ ನಿಲ್ಲಿಸಲಿಲ್ಲ. 15 ಸೆಕೆಂಡ್‌ಗಳಲ್ಲಿ ಕಾರು ಆಳವಾದ ಪ್ರಪಾತಕ್ಕೆ ಬಿದ್ದು ಅವರು ಸ್ಥಳದಲ್ಲೇ ಪ್ರಾಣ ಬಿಟ್ಟರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.