ADVERTISEMENT

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥಗೆ ಜೀವ ಬೆದರಿಕೆ: ಮಹಿಳೆ ಬಂಧನ

ಪಿಟಿಐ
Published 3 ನವೆಂಬರ್ 2024, 13:50 IST
Last Updated 3 ನವೆಂಬರ್ 2024, 13:50 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಮುಂಬೈ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಮುಂಬೈ ಪೊಲೀಸರು 24 ವರ್ಷದ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಠಾಣೆ ಜಿಲ್ಲೆಯ ಉಲ್ಲಾಸನಗರದ ನಿವಾಸಿ ಫಾತಿಮಾ ಖಾನ್‌ ಎಂದು ಗುರುತಿಸಲಾಗಿದೆ. ಈಕೆ ತನ್ನ ಕುಟುಂಬದ ಸದಸ್ಯರೊಂದಿಗೆ ವಾಸಿಸುತ್ತಿದ್ದು, ಈಕೆಯ ತಂದೆ ಟಿಂಬರ್‌ ಉದ್ಯಮದಲ್ಲಿ ತೊಡಗಿದ್ದಾರೆ. ಮಹಿಳೆಯು ಮಾಹಿತಿ ತಂತ್ರಜ್ಞಾನದಲ್ಲಿ ಬಿ. ಎಸ್ಸಿ. ಪದವಿ ಪಡೆದಿದ್ದು, ಅವರಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಸಂಚಾರ ಠಾಣೆ ಪೊಲೀಸರ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಶನಿವಾರ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು. ಅದರಲ್ಲಿ ಆದಿತ್ಯನಾಥ ಅವರು 10 ದಿನಗೊಳಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಮಾದರಿಯಲ್ಲಿ ಹತ್ಯೆಯಾಗುತ್ತಾರೆ ಎಂದು ಬೆದರಿಕೆ ಹಾಕಲಾಗಿತ್ತು.

ADVERTISEMENT

ಮುಂಬೈ ಭಯೋತ್ಪಾದನೆ ನಿಗ್ರಹ ದಳವು ಉಲ್ಲಾಸನಗರ ಪೊಲೀಸ್‌ರೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಪತ್ತೆ ಮಾಡಿ ಬಂಧಿಸಿದೆ. ಆದಿತ್ಯನಾಥ ಅವರು ನ.20ರಂದು ಚುನಾವಣಾ ಪ್ರಚಾರಕ್ಕೆ ಮುಂಬೈಗೆ ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಪೊಲೀಸರು ಹೆಚ್ಚು ನಿಗಾ ವಹಿಸಿದ್ದಾರೆ. 

ಇದನ್ನೂ ಓದಿ: ಅಧಿಕಾರದಿಂದ ಇಳಿಯದಿದ್ದರೆ, ಬಾಬಾ ಸಿದ್ದೀಕಿಯಂತೆ ಹತ್ಯೆ: ಸಿಎಂ ಯೋಗಿಗೆ ಬೆದರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.