ಅಹಮದಾಬಾದ್ (ಗುಜಾರತ್): ‘ಗುಜರಾತ್‌ನ ಅಹಮದಾಬಾದ್‌ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ 80 ವರ್ಷದ ವೃದ್ಧೆಯೊಬ್ಬರು ಸಾವಿಗೀಡಾಗಿದ್ದು, ನಾಲ್ಕು ಮಂದಿಗೆ ಗಾಯವಾಗಿದೆ’ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.
‘ಸ್ಥಳೀಯ ದೇವಾಲಯವೊಂದರ ಜಾತ್ರೆಯ ಅಂಗವಾಗಿ ಪ್ರಕಟಿಸಲಾಗುತ್ತಿದ್ದ ಕರಪತ್ರದಲ್ಲಿ ಸೇರಿಸಬೇಕಿದ್ದ ಹೆಸರುಗಳ ವಿಚಾರಕ್ಕೆ ವಸ್ತ್ರಾಪುರ ಪ್ರದೇಶದ ಒಂದೇ ಸಮುದಾಯದ ಎರಡು ಗುಂಪುಗಳ ಮಧ್ಯೆ ಬುಧವಾರ ರಾತ್ರಿ ಈ ಘರ್ಷಣೆ ನಡೆದಿದೆ. ಕಲ್ಲುಗಳನ್ನು ತೂರಿ ಕೋಲುಗಳಿಂದ ಹೊಡೆದಾಟ ನಡೆಸಿದ್ದಾರೆ. ಈ ಸಂದರ್ಭ ಎದೆಗೆ ಕಲ್ಲೇಟು ಬಿದ್ದು, ಲೀರಾಬೆನ್ ಭರವಾಡ್ ಎಂಬ ವೃದ್ಧೆ ಮೃತಪಟ್ಟಿದ್ದಾರೆ’ ಎಂದಿದ್ದಾರೆ.
‘ಕರಪತ್ರದಲ್ಲಿ ಕೆಲವು ಹೆಸರುಗಳನ್ನು ಸೇರಿಸಲು ಒಂದು ಗುಂಪು ಬಯಸಿತ್ತು. ಆದರೆ, ಇನ್ನೊಂದು ಗುಂಪು ಇದನ್ನು ವಿರೋಧಿಸಿತ್ತು’ ಎಂದೂ ಅವರು ತಿಳಿಸಿದ್ದಾರೆ.
‘ಘಟನೆಗೆ ಸಂಬಂಧಿಸಿದಂತೆ ವಿವಿಧ ಸೆಕ್ಷನ್‌ಗಳ ಅಡಿ 21 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.