ಬಿಜಾಪುರ (ಛತ್ತೀಸಗಢ): ಮಹಿಳೆ ಸೇರಿದಂತೆ ಐವರು ನಕ್ಸಲರು ಬಿಜಾಪುರ ಜಿಲ್ಲೆಯಲ್ಲಿ ಶರಣಾದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
ಈ ಪೈಕಿ ಸುಶೀಲ ಅಲಿಯಾಸ್ ಬುಜ್ಜಿ ಕುರಿತು ಸುಳಿವು ನೀಡಿದವರಿಗೆ ₹5 ಲಕ್ಷ ನಗದು ಬಹುಮಾನ ಘೋಷಿಸಲಾಗಿತ್ತು. 2018ರಿಂದ 2023ರ ಅವಧಿಯಲ್ಲಿ ಪೊಲೀಸ್ ತಂಡದ ಮೇಲೆ ಏಳು ಬಾರಿ ಗುಂಡಿನ ದಾಳಿ ನಡೆಸಿದ ಆರೋಪ ಇವರ ಮೇಲಿದೆ.
‘ಹಿರಿಯ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಅಧಿಕಾರಿಗಳ ಎದುರು ಐವರು ಮಂಗಳವಾರ ಹಾಜರಾಗಿ, ಹಿರಿಯ ನಕ್ಸಲರ ದೌರ್ಜನ್ಯ ಹಾಗೂ ಉಗ್ರವಾದಿಗಳ ಅಮಾನವೀಯ ಸಿದ್ಧಾಂತದಿಂದ ಬೇಸತ್ತು ಶರಣಾಗುತ್ತಿದ್ದೇವೆ ಎಂದಿದ್ದಾರೆ’ ಎಂದು ತಿಳಿಸಿದರು.
ಸರ್ಕಾರದ ನೀತಿಯ ಅನುಸಾರ ಶರಣಾದ ಎಲ್ಲ ನಕ್ಸಲರಿಗೆ ತಲಾ ₹25,000 ನೆರವು ಮತ್ತು ಪುನರ್‌ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.