ನವದೆಹಲಿ: ಮೂರು ದಿನ ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಶುಕ್ರವಾರ ರಾತ್ರಿ 9.20ಕ್ಕೆ ತಾಯ್ನೆಲಕ್ಕೆ ಹೆಜ್ಜೆಯಿಟ್ಟರು. ರಾತ್ರಿ 9.10ರ ಹೊತ್ತಿಗೆ ಅಭಿನಂದನ್ ಅವರು ಪಾಕಿಸ್ತಾನ ಕಡೆಯ ಗಡಿ ಭಾಗ ವಾಘಾದಲ್ಲಿ ಕಾಣಿಸಿಕೊಂಡರು. ಜತೆಗೆ ಪಾಕಿಸ್ತಾನದ ಅಧಿಕಾರಿಗಳು ಮತ್ತು ಓರ್ವ ಮಹಿಳೆ ಅವರೊಂದಿಗೆ ಇದ್ದರು.
ಭಾರತಕ್ಕೆ ಪ್ರವೇಶಿಸಲು ಕ್ಷಣಗಣನೆ ನಡೆಯುತ್ತಿದ್ದಂತೆ ಅಭಿನಂದನ್ ಜತೆ ಅಲ್ಲಿ ವಾಘಾ ಗಡಿಯಲ್ಲಿ ನಿಂತಿರುವ ಮಹಿಳೆ ಯಾರು?ಎಂಬುದು ಎಲ್ಲರಿಗೂ ಕುತೂಹಲ ಹುಟ್ಟಿಸಿತ್ತು.
ಆಕೆ ಯಾರು?
ಆಕೆ ಪಾಕಿಸ್ತಾನದ ವಿದೇಶಾಂಗ ಕಚೇರಿಯಲ್ಲಿ ಭಾರತಕ್ಕಿರುವ ವೈದ್ಯೆ ಡಾ. ಫರಿಹಾ ಬುಗ್ತಿ.ಎಫ್ಎಸ್‍ಪಿ (ಭಾರತದ ಐಎಫ್‍ಎಸ್)ಗೆ ಸಮಾನವಾದ ಪಾಕಿಸ್ತಾನದಲ್ಲಿರುವ ಫಾರಿನ್ ಸರ್ವೀಸ್ ಆಫ್ ಪಾಕಿಸ್ತಾನ್ (ಎಫ್ಎಸ್‍ಪಿ) ಅಧಿಕಾರಿ.
ಪಾಕ್ ಜೈಲಿನಲ್ಲಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಕುಲಭೂಷಣ್ ಜಾದವ್ ಪ್ರಕರಣ ಸೇರಿದಂತೆ ಇತರ ಪ್ರಕರಣಗಳನ್ನ ನಿರ್ವಹಿಸುವ ಪ್ರಧಾನ ಅಧಿಕಾರಿಗಳಲ್ಲೊಬ್ಬರಾಗಿದ್ದಾರೆಫರಿಹಾ .
2017ರಲ್ಲಿ ಇಸ್ಲಾಮಾಬಾದ್‍ನಲ್ಲಿ ಜಾದವ್ ಅವರ ಅಮ್ಮ ಮತ್ತು ಪತ್ನಿಗೆ ಜಾದವ್ ಭೇಟಿಗೆ ಅವಕಾಶ ಕಲ್ಪಿಸಿದಾಗ ಅಲ್ಲಿಯೂ ಫರಿಹಾ ಇದ್ದರು.
ಕಳೆದ ತಿಂಗಳು ಜಾದವ್ ಪ್ರಕರಣದ ವಿಚಾರಣೆ ನೆದರ್‌ಲೆಂಡ್ ಹೇಗ್ ನಲ್ಲಿ ನಡೆದಾಗ ಅಲ್ಲಿಗೂ ಫರಿಹಾ ಬಂದಿದ್ದರು.
2005ರಲ್ಲಿ ಪಾಕಿಸ್ತಾನದ ವಿದೇಶ ವ್ಯವಹಾರಗಳ ಕಚೇರಿಯಲ್ಲಿ ವೃತ್ತಿ ಜೀವನ ಆರಂಭಿಸಿದ ಇವರು 2007ರಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ಆಗಿ ಕಾರ್ಯ ನಿರ್ವಹಿಸಿದ್ದರು.
ಇವನ್ನೂ ಓದಿ...
*ದೇಶಕ್ಕೆ ಮರಳಿದ ವಿಂಗ್ ಕಮಾಂಡರ್ ಅಭಿನಂದನ್‌ಗೆ ಬಿಸಿಸಿಐ, ಕ್ರಿಕೆಟಿಗರಿಂದ ಗೌರವ
*ತಾಯ್ನಾಡಿಗೆ ‘ಅಭಿ’ವಂದನೆ, ಆತಂಕ ಸೃಷ್ಟಿಸಿದ ವಿಳಂಬ
*ಅಭಿನಂದನ್ ಬಿಡುಗಡೆ ಮಾಡಲು ಪಾಕಿಸ್ತಾನ ವಿಳಂಬ ಮಾಡಿದ್ದು ಯಾಕೆ?
*ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ...
*ಸೇನೆಯ ಬಗ್ಗೆ ಗೌರವವಿದ್ದರೆ ಫೇಸ್‌ಬುಕ್‌ನಲ್ಲಿ ಈ 10 ನಿಯಮಗಳನ್ನು ಪಾಲಿಸಿ
*ಧೀರರ ಕುಟುಂಬ: ವಿಂಗ್ ಕಮಾಂಡರ್ ಅಭಿನಂದನ್ ಅವರ ಮೂರು ತಲೆಮಾರು ದೇಶಕ್ಕಾಗಿ ದುಡಿದಿದೆ
*ವಿಮಾನದಲ್ಲಿ ಅಭಿನಂದನ್ ಕುಟುಂಬಕ್ಕೆ ಎದ್ದು ನಿಂತು ಗೌರವ ಸೂಚಿಸಿದ ಪ್ರಯಾಣಿಕರು
*ಪಾಕ್ ಪ್ರಯಾಣಿಕರಿಗೆ ಆಹಾರ ವಿತರಿಸಿದ ಭಾರತದ ಪೊಲೀಸರು
*ವಾಘಾ- ಅಟ್ಟಾರಿ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ರದ್ದು ಮಾಡಿದ ಬಿಎಸ್‍ಎಫ್
*ಅಭಿನಂದನ್ ಕರೆತರಲು ವಿಮಾನ ಕಳಿಸಬೇಡಿ ಎಂದ ಪಾಕ್
*ವಿಂಗ್ ಕಮಾಂಡರ್ ಅಭಿನಂದನ್ ಸ್ವಾಗತಕ್ಕೆ ವಾಘಾ ಗಡಿಯಲ್ಲಿ ಸಿದ್ಧತೆ
*ಅಭಿನಂದನ್ ಕರೆತನ್ನಿ: ಕಾಳಜಿಯ ಕರೆ
*ಪಾಕಿಸ್ತಾನದ ವಶದಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್? ವಿಡಿಯೊ ಬಿಡುಗಡೆ
*ಭಾರತ ವಾಯುಪಡೆ ಉರುಳಿಸಿದ ಪಾಕ್ ಯುದ್ಧವಿಮಾನದ ಮೊದಲ ಚಿತ್ರ ಬಹಿರಂಗ
*ಯಡಿಯೂರಪ್ಪ ಹೇಳಿಕೆಯನ್ನು ರಿಟ್ವೀಟ್ ಮಾಡಿ ವ್ಯಂಗ್ಯವಾಡಿದಪಾಕ್ ಪ್ರಧಾನಿಯ ಪಕ್ಷ
*ಪೈಲಟ್ ಅಭಿನಂದನ್ ವಿಡಿಯೊ ಲಿಂಕ್ ತೆಗೆಯುವಂತೆ ಯುಟ್ಯೂಬ್‌ಗೆ ಐಟಿ ಸಚಿವಾಲಯ ಆಗ್ರಹ
*ವಾಯುದಾಳಿಯು ಕರ್ನಾಟಕದಲ್ಲಿ 22 ಸ್ಥಾನಗಳನ್ನು ಗೆಲ್ಲಲು ನೆರವಾಗಲಿದೆ: ಯಡಿಯೂರಪ್ಪ
*ನೀವು ನಿದ್ರೆ ಮಾಡ್ತೀರೋ ಇಲ್ವೋ; ಅಭಿನಂದನ್ ಅವರನ್ನು ಕರೆತನ್ನಿ: ನಟಿ ರಮ್ಯಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.