ADVERTISEMENT

ಕೋವಿಡ್-19 ಲಸಿಕೆಯ ಮೊದಲನೇ ಡೋಸ್ ಪಡೆದ 100 ವರ್ಷ ತುಂಬಿದ ವೃದ್ಧೆ!

ಪಿಟಿಐ
Published 19 ಮಾರ್ಚ್ 2021, 7:16 IST
Last Updated 19 ಮಾರ್ಚ್ 2021, 7:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಕಳೆದ ಸೆಪ್ಟೆಂಬರ್‌ನಲ್ಲಿ ಸಾಂಕ್ರಾಮಿಕ ರೋಗ ಉತ್ತುಂಗಕ್ಕೇರಿದ ವೇಳೆ 100ನೇ ವರ್ಷಕ್ಕೆ ಕಾಲಿಟ್ಟ ವೃದ್ಧೆ ಕಮಲಾ ದಾಸ್ ಅವರು ಗುರುವಾರ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ ಎಂದು ಅವರ ಮಗಳು ತಿಳಿಸಿದ್ದಾರೆ.

ದಿ. ಮೇಜರ್ ಜನರಲ್ (ನಿವೃತ್ತ) ಚಾಂದ್ ಎನ್. ದಾಸ್ ಅವರ ಪತ್ನಿ ಕಮಲಾ ದಾಸ್, 1920ರ ಸೆಪ್ಟೆಂಬರ್ 3 ರಂದು ಜನಿಸಿದ್ದಾರೆ. ಲಸಿಕೆ ಪಡೆದಿರುವುದು 'ಸಂಪೂರ್ಣವಾಗಿ ನೋವುರಹಿತ'ವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

'ಸಾಂಕ್ರಾಮಿಕದ ಸಮಯದಲ್ಲಿ ನನ್ನ ತಾಯಿ 100ನೇ ವರ್ಷಕ್ಕೆ ಕಾಲಿಟ್ಟರು ಮತ್ತು ಸೆಪ್ಟೆಂಬರ್ 2ರಿಂದ 4ರವರೆಗೆ ಮೂರು ದಿನಗಳ ಆಚರಣೆ ನಡೆಸಿದ್ದೆವು. ಏಕೆಂದರೆ ಆಗ ದೊಡ್ಡ ಪಾರ್ಟಿಗಳಿಗೆ ಅವಕಾಶವಿರಲಿಲ್ಲ. ತಾಯಿಗೆ ಕೋವಿಡ್-19 ಸೋಂಕು ತಗುಲಬಹುದೆಂಬ ಭಯದಲ್ಲಿ ನನ್ನ ಒಡಹುಟ್ಟಿದವರು ಇದ್ದರು. ಆದರೆ ಆಕೆ ಉತ್ತಮ ಜೀವನವನ್ನು ನಡೆಸಿದ್ದಾಳೆಂದು ನಾವು ಭಾವಿಸಿದ್ದೇವೆ ಮತ್ತು ಪ್ರತಿಯೊಬ್ಬರೂ ತಮ್ಮ 100 ನೇ ಹುಟ್ಟುಹಬ್ಬವನ್ನು ನೋಡುವುದಿಲ್ಲ. ಆದ್ದರಿಂದ, ನಾವು ಅದನ್ನು ಅವರಿಗೆ ವಿಶೇಷವಾಗಿರುವಂತೆ ಮಾಡಿದ್ದೇವೆ' ಎಂದು ಅವರ ಕಿರಿಯ ಮಗಳು ಜ್ಯೋತಿಕಾ ಸಿಕಂದ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ದಕ್ಷಿಣ ದೆಹಲಿಯ ನಿವಾಸಿಯಾದ ವೃದ್ಧೆಗೆ ಇಲ್ಲಿನ ಬಿಎಲ್‌ಕೆ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಯಿತು. ಅದಾದ ಒಂದು ದಿನದ ಬಳಿಕ 1920ರಲ್ಲಿ ಜನಿಸಿದ ಬ್ರಿಜ್ ಪ್ರಕಾಶ್ ಗುಪ್ತಾ ಅವರು ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್‌ ಅನ್ನು ಸ್ವೀಕರಿಸಿರುವುದಾಗಿ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.

'ಕಳೆದ ವರ್ಷವಿಡೀ ಸಾಂಕ್ರಾಮಿಕದ ಸಮಯದಲ್ಲಿ ನಾವು ಆಕೆಗೆ ಸಾಮಾನ್ಯ ಜೀವನವನ್ನು ನಡೆಸಲು ಅವಕಾಶ ಮಾಡಿಕೊಟ್ಟೆವು ಮತ್ತು ಆಕೆ ಈಗ ಚೆನ್ನಾಗಿದ್ದಾಳೆ. ಇಂದು ಆಕೆ ಲಸಿಕೆಯನ್ನು ಪಡೆದಿದ್ದಾಳೆ' ಎಂದು 72 ವರ್ಷದ ಸಿಕಂದ್ತಿಳಿಸಿದ್ದಾರೆ. ಲಸಿಕೆ ಪಡೆಯುವುದು ನೋವು ರಹಿತವಾಗಿದೆ. ಅದನ್ನು ಯಾವ ಕೈಯಿಗೆ ನೀಡಲಾಯಿತು ಎಂಬುದೇ ನೆನಪಿಲ್ಲ ಎಂದು ನನಗೆ ತಿಳಿಸಿದರು ಎಂದು ಮಗಳು ಹೇಳಿದ್ದಾರೆ.

ಎರಡನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದ ಮತ್ತು 1965 ರಲ್ಲಿ ಸೇನೆಯಿಂದ ನಿವೃತ್ತರಾದ ಮತ್ತು ಸಶಸ್ತ್ರ ಪಡೆಗಳ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿರುವ ತನ್ನ ತಂದೆ ಮೇಜರ್ ಜನರಲ್ ದಾಸ್ ಅವರನ್ನು ಇದೇವೇಳೆ ಸಿಕಂದ್ ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.