ಕೋಟ್ಟಯಂ: ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿ ಅಲ್ಲಿಂದ ವಾಪಸ್ ಆಗಿದ್ದ ಮಹಿಳೆಯರ ವಿರುದ್ಧ ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊಳೆತ ಮೊಟ್ಟೆ ಎಸೆದು ಪ್ರತಿಭಟನೆ ನಡೆದಿದೆ. ಸೋಮವಾರ ಸಂಜೆ ಬಿಂದು ಮತ್ತು ಕನಕ ದುರ್ಗಾ ಮೆಡಿಕಲ್ ಕಾಲೇಜಿಗೆ ಬಂದಿದ್ದರು.ಆ ವೇಳೆ ಅಲ್ಲಿಗೆ ಬಂದ ಪ್ರತಿಭಟನಾಕಾರರು ಶರಣಂ ಕೂಗಿದ್ದಾರೆ.ಈ ಮಧ್ಯೆಕೊಳೆತ ಮೊಟ್ಟೆಗಳನ್ನು ಎಸೆದಿದ್ದಿದ್ದಾರೆ. ಈ ಪ್ರಕರಣದಲ್ಲಿ 6 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸೋಮವಾರ ಶಬರಿಮಲೆ ಹತ್ತಲುಬಂದಮಹಿಳೆಯರನ್ನು ತಡೆದ ಪ್ರಕರಣದಲ್ಲಿ ಕಂಡರೆ ಗುರುತು ಪತ್ತೆ ಮಾಡಬಹುದಾದ 150 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.ಮಲಪ್ಪುರಂ ಅಂಞಾಡಿಪ್ಪುರಂ ನಿವಾಸಿ ಕನಕದುರ್ಗಾ, ಕೋಯಿಕ್ಕೋಡ್ ಕೊಯಿಲಾಂಡಿ ನಿವಾಸಿ ಬಿಂದು ಎಂಬವರು ಶಬರಿಮಲೆಹತ್ತಲು ಯತ್ನಿಸಿದ್ದರು. ಅಪ್ಪಾಚ್ಚಿಮೇಡುವಿನಿಂದಲೇ ಇವರ ವಿರುದ್ಧ ಪ್ರತಿಭಟನೆ ನಡೆದಿತ್ತು, ಆದರೆ ಪ್ರತಿಭಟನಾಕಾರರನ್ನು ಬಲವಂತವಾಗಿನೂಕಿದ ಪೊಲೀಸರು ಮಹಿಳೆಯರನ್ನು ಮರಕ್ಕೂಟಂವರೆಗೆ ತಲುಪಿಸಿದ್ದರು. ಮರಕ್ಕೂಟಂನಲ್ಲಿ ಪ್ರತಿಭಟನಾಕಾರರು ತಡೆಯೊಡ್ಡಿದಾಗ ಕನಕದುರ್ಗಾ ಅವರು ಅಸ್ವಸ್ಥರಾದರು. ಹಾಗಾಗಿ ಮಲೆ ಹತ್ತದೆ ವಾಪಸ್ ಮರಳಿದರು. ಆನಂತರ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.