ADVERTISEMENT

ಮಹಿಳಾ ದಿನಾಚರಣೆಗೆ 11 ಭಾಷೆ, 11 ಬಣ್ಣಗಳಲ್ಲಿ ಡೂಡಲ್ ಗೌರವ

ಏಜೆನ್ಸೀಸ್
Published 8 ಮಾರ್ಚ್ 2019, 7:06 IST
Last Updated 8 ಮಾರ್ಚ್ 2019, 7:06 IST
   

ನವದೆಹಲಿ: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಗೂಗಲ್ ಸಂಸ್ಥೆ 11 ಭಾಷೆ, 11 ಬಣ್ಣಗಳಲ್ಲಿ ಡೂಡಲ್ ಚಿತ್ರಿಸುವ ಮೂಲಕ ಮಹಿಳೆಯರಿಗೆ ಶುಭಾಶಯ ಕೋರಿದೆ.

ಗೂಗಲ್ 11 ಬಣ್ಣಗಳ ಬಾಕ್ಸ್‌ನಲ್ಲಿ ಹಿಂದಿ, ಉರ್ದು, ಬಂಗಾಲಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಮಹಿಳೆ ಎಂಬ ಪದವನ್ನು ಬರೆದಿದೆ.

ಒಮ್ಮೆ ಯಾವುದಾದರೊಂದು ಬಾಕ್ಸ್‌ ಮೇಲೆ ಕ್ಲಿಕ್ ಮಾಡಬೇಕು. ತದನಂತರ ಅಲ್ಲಿ ಒಂದಾದ ಮೇಲೊಂದರಂತೆ ಒಟ್ಟು 14 ಸ್ಫೂರ್ತಿದಾಯಕ ಸಾಲುಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಇದರಲ್ಲಿನ ಮಹಿಳಾ ಸಬಲೀಕರಣ ಸಾರುವ ವಾಕ್ಯಗಳು ಸೇರಿದಂತೆ ಇಡೀ ವಿನ್ಯಾಸದಲ್ಲಿ ಜಗತ್ತಿನ ಕೆಲವು ಮಹಿಳಾ ವಿನ್ಯಾಸಕಾರರ ಶ್ರಮವಿದೆ ಎಂದು ಗೂಗಲ್ ಹೇಳಿದೆ.

ADVERTISEMENT

ಇದರಲ್ಲಿ ಭಾರತದ ಇಬ್ಬರು ಮಹಿಳಾ ಸಾಧಕಿಯರಾದ ಮೇರಿಕೋಮ್ ಹಾಗೂ ಎನ್‌.ಎಲ್ ಬೆನೊ ಜೆಫೈನ್ ಅವರಸ್ಫೂರ್ತಿದಾಯಕ ಸಾಲುಗಳನ್ನು ಬಳಸಿಕೊಳ್ಳಲಾಗಿದೆ.

ಬಾಕ್ಸರ್ ಮೇರಿಕೋಮ್ ಅವರು ಕಳೆದ ನವೆಂಬರ್‌ನಲ್ಲಿ ನಡೆದಿದ್ದಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದ್ದರು. ಅವರು ಮಹಿಳಾ ಶಕ್ತಿಯನ್ನು ಅನಾವರಣ ಮಾಡುವುದು ಹೀಗೆ...

‘ನೀನುದುರ್ಬಲಳು ಎಂದುಹೇಳಬೇಡ. ಏಕೆಂದರೆ ನೀನೊಬ್ಬಳು ಹೆಣ್ಣು’...

ಎನ್‌.ಎಲ್ ಬೆನೊ ಜೆಫೈನ್ ಇವರು ಮೊದಲ ಅಂಧಭಾರತೀಯ ವಿದೇಶಿ ಸೇವಾ ಅಧಿಕಾರಿ. ಮೂಲತಃಚೆನ್ನೈನವರು.

‘ನಮ್ಮ ಮನಸ್ಸುಗಳು ಭಿನ್ನಮತಗಳನ್ನು ಸ್ವೀಕರಿಸಲಾರದಷ್ಟು ಸೂಕ್ಷ್ಮವಾಗಿವೆ’...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.