ವಯನಾಡು: ಕೇರಳದ ವಯನಾಡ್ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಾನು ಸಿಪಿಎಂ ವಿರುದ್ಧಏನೂ ಮಾತನಾಡುವುದಿಲ್ಲ ಎಂದಿದ್ದಾರೆ.
ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿ ರೋಡ್ ಶೋ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ಸಿಪಿಎಂ ತನ್ನ ಮೇಲೆ ವಾಗ್ದಾಳಿ ನಡೆಸಲಿದೆ, ಆದರೆ ಇದಕ್ಕೆ ಪ್ರತಿಯಾಗಿ ನಾನೇನೂ ಹೇಳಲಾರೆ ಎಂದಿದ್ದಾರೆ.
ಸಿಪಿಎಂ ನನ್ನ ವಿರುದ್ಧ ಜಗಳವಾಡಲಿದೆ.ಆದರೆ ನಾನು ಸಿಪಿಐ (ಎಂ) ವಿರುದ್ಧ ಒಂದೇ ಒಂದು ಪದ ಮಾತನಾಡಲಾರೆ, ನಾನು ಏಕತೆಯ ಸಂದೇಶ ಸಾರಲು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ ರಾಹುಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.