ADVERTISEMENT

ಏಕತೆಗೆ ಸಂಸ್ಕೃತಿಯ ಕೊಡುಗೆ ಗಣನೀಯ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 26 ಆಗಸ್ಟ್ 2023, 15:18 IST
Last Updated 26 ಆಗಸ್ಟ್ 2023, 15:18 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ವಾರಾಣಸಿ: ‘ಏಕತೆಯನ್ನು ಮೂಡಿಸುವಲ್ಲಿ ಸಂಸ್ಕೃತಿಯು ಅಂತರ್ಗತವಾದ ಸಾಮರ್ಥ್ಯ ಹೊಂದಿದೆ. ಮನುಕುಲದ ಏಕತೆ ದೃಷ್ಟಿಯಿಂದ ಜಿ20 ಸಂಸ್ಕೃತಿ ಸಚಿವರ ಸಭೆಯು ಮಹತ್ವದ್ದಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ ಜಿ20 ಸದಸ್ಯ ರಾಷ್ಟ್ರಗಳ ಸಂಸ್ಕೃತಿ ಸಚಿವರ ಸಭೆಗೆ ಅವರು ವಿಡಿಯೊ ಸಂದೇಶವನ್ನು ಕಳುಹಿಸಿದ್ದಾರೆ. ‘ವಾರಾಣಸಿಯು ಸಂಸ್ಕೃತಿ ಸಂಪತ್ತಿನ ಭಂಡಾರವಾಗಿದೆ. ಸತ್ಯದ ಜ್ಞಾನಕೇಂದ್ರವಾಗಿದೆ’ ಎಂದು ಬಣ್ಣಿಸಿದ್ದಾರೆ.

ಸಂಸ್ಕೃತಿಗೆ ಒಗ್ಗೂಡಿಸುವ ಅನೂಹ್ಯ ಸಾಮರ್ಥ್ಯವಿದೆ. ಇಡೀ ಮನುಕುಲಕ್ಕಾಗಿ ನಿಮ್ಮಗಳ ಕಾರ್ಯ ಹೆಚ್ಚು ಮಹತ್ವದ್ದಾಗಿದೆ ಎಂದು ವಿವಿಧ ದೇಶಗಳ ಸಚಿವರನ್ನು ಉದ್ದೇಶಿಸಿ ಹೇಳಿದರು.

ADVERTISEMENT

‘ನವದೆಹಲಿಯ ವಸ್ತುಸಂಗ್ರಹಾಲಯ ದೇಶದ ಪ್ರಜಾಪ್ರಭುತ್ವದ ಪರಂಪರೆಯನ್ನು ಬಿಂಬಿಸುತ್ತಿದೆ. ಆರ್ಥಿಕತೆ ಹಾಗೂ ವೈವಿಧ್ಯತೆ ಅಭಿವೃದ್ಧಿಗಾಗಿ ಪರಂಪರೆ ಮಹತ್ವದ ಆಸ್ತಿಯಾಗಿದೆ. ‘ಪರಂಪರೆ ಮತ್ತು ಅಭಿವೃದ್ಧಿ’ ದೇಶದ ಘೋಷವಾಕ್ಯವು ಆಗಿದೆ’ ಎಂದರು.

ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಿಡಲು ಭಾರತವು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಿದೆ ಎಂದು ಪ್ರಧಾನಿ ತಮ್ಮ ಒಂಬತ್ತು ನಿಮಿಷದ ವಿಡಿಯೊ ಸಂದೇಶದಲ್ಲಿ ಸಭೆಯ ಗಮನಕ್ಕೆ ತಂದರು.

ಪ್ರಧಾನಿ ಅವರ ಲೋಕಸಭಾ ಕ್ಷೇತ್ರವು ಆಗಿರುವ ವಾರಾಣಸಿಯಲ್ಲಿ ಆಗಸ್ಟ್ 24–25ರಂದು ಜಿ20 ಶೃಂಗದ ಸದಸ್ಯ ರಾಷ್ಟ್ರಗಳ ಸಚಿವರ ನಾಲ್ಕನೇ ಮತ್ತು ಅಂತಿಮ ಸಭೆಯು ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.