ADVERTISEMENT

ಆನೆಗಳಿಗೆ ಅನುಕೂಲಕರ ಆವಾಸಸ್ಥಾನ ಖಾತ್ರಿಪಡಿಸಲು ಭಾರತ ಬದ್ಧವಾಗಿದೆ: ಪ್ರಧಾನಿ ಮೋದಿ

ಪಿಟಿಐ
Published 12 ಆಗಸ್ಟ್ 2024, 5:44 IST
Last Updated 12 ಆಗಸ್ಟ್ 2024, 5:44 IST
<div class="paragraphs"><p>ಆನೆ</p></div>

ಆನೆ

   

ಚಿತ್ರಕೃಪೆ: ನರೇಂದ್ರ ಮೋದಿ ಅವರ ‘ಎಕ್ಸ್‌’ ಖಾತೆಯಿಂದ

ನವದೆಹಲಿ: ಆನೆಗಳಿಗೆ ಅನುಕೂಲಕರವಾದ ಆವಾಸಸ್ಥಾನವನ್ನು ಖಾತ್ರಿಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.

ADVERTISEMENT

ವಿಶ್ವ ಆನೆ ದಿನದ ಪ್ರಯುಕ್ತ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಆನೆಗಳನ್ನು ಸಂರಕ್ಷಿಸುವ ಸಮುದಾಯದ ಪ್ರಯತ್ನಗಳನ್ನು ಪ್ರಶಂಸಿಸುವ ಸುಸಂದರ್ಭ ಇದಾಗಿದೆ. ಆನೆಗಳು ಅಭಿವೃದ್ಧಿ ಹೊಂದಲು ಅನುಕೂಲಕರವಾದ ಆವಾಸಸ್ಥಾನವನ್ನು ಖಾತ್ರಿಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವುದು ನಮ್ಮ ಬದ್ಧತೆಯಾಗಿದೆ. ಆನೆಗಳು ನಮ್ಮ ಸಂಸ್ಕೃತಿ ಮತ್ತು ಇತಿಹಾಸದೊಂದಿಗೆ ಸಂಬಂಧ ಹೊಂದಿವೆ. ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಆನೆಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಂತೋಷದ ಸಂಗತಿ’ ಎಂದು ಬರೆದುಕೊಂಡಿದ್ದಾರೆ.

ವಿಶ್ವ ಆನೆ ದಿನಾಚರಣೆ ಅಂಗವಾಗಿ ಆನೆಗಳು ಸಂಭ್ರಮಿಸಲು ವಿವಿಧ ಚಟುವಟಿಕೆಗಳನ್ನು ಉದ್ಯಾನಗಳಲ್ಲಿ ರೂಪಿಸಲಾಗಿದೆ. ಆನೆಗಳಿಗೆ ಗೆಣಸು, ಬಾಳೆಹಣ್ಣು, ಕಲ್ಲಂಗಡಿ, ಕಬ್ಬು, ಸೇರಿದಂತೆ ವಿಶೇಷ ಆಹಾರವನ್ನು ನೀಡಲಾಗುತ್ತಿದೆ.

ಆನೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆನೆಗಳ ನಿರ್ವಹಣೆ, ಕಾಡಿನಲ್ಲಿ ಎದುರಿಸುವ ಸಮಸ್ಯೆ, ಆನೆ ಚಲನ ವಲನಗಳ ಬಗ್ಗೆ ಪ್ರವಾಸಿಗರಿಗೆ ಉದ್ಯಾನದ ಸ್ವಯಂಸೇವಕರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.