ADVERTISEMENT

ಪ್ಲಾಸ್ಟಿಕ್‌ಗೆ ಜಗತ್ತು ವಿದಾಯ ಹೇಳುವ ಕಾಲ ಸಮೀಪಿಸಿದೆ: ಪ್ರಧಾನಿ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 7:43 IST
Last Updated 9 ಸೆಪ್ಟೆಂಬರ್ 2019, 7:43 IST
   

ನವದೆಹಲಿ:ಪುನರ್‌ ಬಳಕೆಯಾದ ಪ್ಲಾಸ್ಟಿಕ್‌ಗೆ ಜಗತ್ತು ಗುಡ್‌ ಬೈ ಹೇಳುವ ಕಾಲ ಸನ್ನಿಹಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಹವಾಮಾನ ಬದಲಾವಣೆ ಬಿಕ್ಕಟ್ಟಿನ ಕುರಿತ ಸಭೆಯಲ್ಲಿ ಮಾತನಾಡಿರುವ ಅವರು, ಮಾನವ ಶ್ರೇಯೋಭಿವೃದ್ಧಿಯು ಪರಿಸರದೊಂದಿಗೆ ಬೆಸೆದುಕೊಂಡಿದೆ. ಆದ್ದರಿಂದ ಈ ಜಗತ್ತು ಹವಾಮಾನ ಬದಲಾವಣೆ ವಿರುದ್ಧ ಹೋರಾಡಬೇಕಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.

ADVERTISEMENT

‘ಭಾರತದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ವ್ಯಾಪಕವಾಗಿ ನಿರ್ಬಂಧಿಸಲಾಗುವುದು. ಉತ್ಪಾದನೆ, ಬಳಕೆ, ಆಮದಿನ ಮೇಲೂ ನಿಷೇಧ ಹೇರಲಾಗುವುದು ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ,’ ಎಂದುಇತ್ತೀಚೆಗಷ್ಟೇ ಸುದ್ದಿ ಸಂಸ್ಥೆ ರಾಯ್ಟರ್ಸ್‌ ವರದಿ ಮಾಡಿತ್ತು.

ಅಕ್ಟೋಬರ್‌–2 ಮಹಾತ್ಮಾ ಗಾಂಧಿ ಜಯಂತಿ. ಅಂದು ಭಾರತವು ಆರು ಬಗೆಯ ಪ್ಲಾಸ್ಟಿಕ್‌ಗಳ ಬಳಕೆಯನ್ನು ನಿಷೇಧಿಸುತ್ತಿದೆ. ಪ್ಲಾಸ್ಟಿಕ್‌ ಚೀಲಗಳು, ಕಪ್‌ಗಳು, ತಟ್ಟೆಗಳು, ಬಾಟಲಿಗಳು, ಸ್ಟ್ರಾಗಳು ಈ ಪಟ್ಟಿಯಲ್ಲಿವೆ.

ದಿನದಿಂದ ದಿನಕ್ಕೆ ಬೃಹತ್‌ ಸಮಸ್ಯಯಾಗಿ ಕಾಡುತ್ತಿರುವ ಪ್ಲಾಸ್ಟಿಕ್‌ ಬಗ್ಗೆ ಜಗತ್ತು ಆತಂಕಕ್ಕೀಡಾಗಿದೆ. ಅದರಲ್ಲೂ ಸಾಗರದ ಒಡಲಲ್ಲಿ ಶೇ. 50ರಷ್ಟು ಮರುಬಳಕೆಯಾಗದ ಪ್ಲಾಸ್ಟಿಕ್‌ ಸೇರಿದ್ದು, ಜಲಚರಗಳಿಗೆ ಮಾರಕವಾಗಿ ಪರಣಿಮಿಸಿದೆ. ಇದು ಮಾನವರ ಆಹಾರ ಸರಪಳಿಯ ಮೇಲೆ ವ್ಯತಿರಿಕ್ತ ಪರಿಣಾಮಗಳ ಬೀರುತ್ತಿದೆ ಎಂದು ವರದಿಗಳು ಹೇಳುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.