ADVERTISEMENT

ಅಂಗಡಿಗಳ ನಾಮಫಲಕಗಳು ತಮಿಳಿನಲ್ಲಿರಲಿ: ಸ್ಟಾಲಿನ್

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 15:48 IST
Last Updated 23 ಜುಲೈ 2024, 15:48 IST
ಎಂ.ಕೆ ಸ್ಟಾಲಿನ್‌
ಎಂ.ಕೆ ಸ್ಟಾಲಿನ್‌   

ಚೆನ್ನೈ: ತಮಿಳುನಾಡಿನಲ್ಲಿರುವ ಎಲ್ಲ ಅಂಗಡಿ ಮತ್ತು ವಾಣಿಜ್ಯ ಕಟ್ಟಡಗಳ ನಾಮಫಲಕಗಳಲ್ಲಿ ತಮಿಳು ಭಾಷೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ಮಂಗಳವಾರ ಸೂಚಿಸಿದ್ದಾರೆ.

ವರ್ತಕರ ಕಲ್ಯಾಣ ಮಂಡಳಿಯ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್‌ ಅವರು,  ’ತಮಿಳುನಾಡಿನ ಯಾವುದೇ ರಸ್ತೆಗಳಲ್ಲಿ ತಮಿಳು ಕಾಣುವುದಿಲ್ಲ ಎಂದು ಯಾರು ಹೇಳಬಾರದು. ಸ್ಥಳಿಯ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು. ಆದರೆ, ಹಲವಾರು ವರ್ತಕರು ನಾಮಫಲಕಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಸಿದ್ದಾರೆ’ ಎಂದರು

 ‘ಈ ನಿಯಮ ತಮಿಳುನಾಡಿನಲ್ಲಿ ಮಾತ್ರ ಇಲ್ಲ. ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳು ಸ್ಥಳಿಯ ಭಾಷೆಗಳಿಗೆ ಹೆಚ್ಚು ಒತ್ತು ನೀಡುತ್ತಿವೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.