ADVERTISEMENT

ಪುಲ್ವಾಮ ದಾಳಿ: ಅಮಿತ್‌ ಶಾ ಹೇಳಿಕೆಗೆ ಸತ್ಯಪಾಲ್‌ ಮಲಿಕ್‌ ತಿರುಗೇಟು

ಪಿಟಿಐ
Published 25 ಏಪ್ರಿಲ್ 2023, 15:53 IST
Last Updated 25 ಏಪ್ರಿಲ್ 2023, 15:53 IST
ಸತ್ಯಪಾಲ್‌ ಮಲಿಕ್‌
ಸತ್ಯಪಾಲ್‌ ಮಲಿಕ್‌   

ಜೈಪುರ: ರಾಜ್ಯಪಾಲ ಹುದ್ದೆ ತೊರೆದ ನಂತರ 2019ರ ಪುಲ್ವಾಮ ಭಯೋತ್ಪಾದಕ ದಾಳಿ ಕುರಿತು ಪ್ರಶ್ನೆ ಎತ್ತುತ್ತಿದ್ದೇನೆ ಎಂದು ಹೇಳುವುದು ತಪ್ಪು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಹೇಳಿದ್ದಾರೆ.

ರಾಜಸ್ಥಾನದ ಸಿಕಾರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಾಳಿ ನಡೆದ ದಿನವೂ ಈ ಬಗ್ಗೆ ಧ್ವನಿ ಎತ್ತಿದ್ದೆ’ ಎಂದು ಹೇಳಿದರು.

ಕೇಂದ್ರ ಸಚಿವ ಅಮಿತ್‌ ಶಾ ಅವರ, ‘ನಮ್ಮ ಜೊತೆಗಿನ ಸಂಬಂಧ ಕಡಿದುಕೊಂಡ ನಂತರ ಮಲಿಕ್‌ ಆರೋಪ ಮಾಡುತ್ತಿದ್ದಾರೆ’ ಎಂಬ ಹೇಳಿಕೆಗೆ ತಿರುಗೇಟು ನೀಡಿ ಹೀಗೆ ಪ್ರತಿಕ್ರಿಯಿಸಿದರು. 

ADVERTISEMENT

2019ರ ಫೆಬ್ರುವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 40 ಸಿಆರ್‌ಪಿಎಫ್‌ ಉಗ್ರರು ಹುತಾತ್ಮರಾಗಿದ್ದರು. ಗುಪ್ತಚರ ಸಂಸ್ಥೆಯ ವೈಫಲ್ಯ ಮತ್ತು ಯೋಧರ ಪ್ರಯಾಣಕ್ಕೆ ಗೃಹ ಸಚಿವಾಲಯ ವಿಮಾನ ನೀಡದಿರುವುದೇ ದಾಳಿಗೆ ಕಾರಣ ಎಂದು ಮಲಿಕ್‌ ಇತ್ತೀಚೆಗೆ  ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.