ADVERTISEMENT

ನವದೆಹಲಿ: ಯಮುನಾ ನದಿ ನೀರಿನ ಮಟ್ಟದಲ್ಲಿ ತುಸು ಇಳಿಕೆ

ಪಿಟಿಐ
Published 22 ಜುಲೈ 2023, 11:48 IST
Last Updated 22 ಜುಲೈ 2023, 11:48 IST
 ಯಮುನಾ ನದಿ
ಯಮುನಾ ನದಿ   

ನವದೆಹಲಿ: ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಅಪಾಯ ಮಟ್ಟದಲ್ಲಿದ್ದ ಯಮುನಾ ನದಿ ನೀರಿನ ಹರಿವು ಶನಿವಾರ ಬೆಳಿಗ್ಗೆ ತುಸು ತಗ್ಗಿತ್ತು. ಆದರೆ, ಉತ್ತರಾಖಂಡದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ನದಿ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ದತ್ತಾಂಶದ ಪ್ರಕಾರ, ಶುಕ್ರವಾರ ಬೆಳಿಗ್ಗೆ 6 ಗಂಟೆ ವೇಳೆಗೆ ನದಿ ನೀರಿನ ಮಟ್ಟ 205.29 ಮೀಟರ್‌ ಇತ್ತು. ಶನಿವಾರ ಬೆಳಿಗ್ಗೆ 6 ಗಂಟೆ ವೇಳೆಗೆ 205.29 ಮೀಟರ್‌ಗೆ ಇಳಿದಿತ್ತು. ಯಮುನಾನಗರದಲ್ಲಿಯ ಹಥನಿಕುಂಡ ಬ್ಯಾರೇಜ್‌ನಲ್ಲಿ ಬೆಳಿಗ್ಗೆ 9 ಗಂಟೆ ವೇಳೆ ನೀರಿನ ಹರಿವಿನ ಪ್ರಮಾಣ 1.47 ಲಕ್ಷ ಕ್ಯುಸೆಕ್‌ ಇತ್ತು. 

ಜುಲೈ 25ರವರೆಗೆ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ. ಮಳೆಯಿಂದಾಗಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾದರೆ, ತಗ್ಗು ಪ್ರದೇಶದಲ್ಲಿ ಸಿಲುಕಿರುವ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ಮತ್ತಷ್ಟು ವಿಳಂಬವಾಗಲಿದೆ ಎನ್ನಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.