ಅಬ್ಬಾ... ನೋಡ, ನೋಡುತ್ತಲೇ 2018 ಕಳೆದು ಹೋಯಿತಲ್ಲ. ಸಿಹಿ-ಕಹಿ ನೆನಪುಗಳ ಜತೆಗೆ ಮತ್ತೊಂದು ಹೊಸ ವರ್ಷಕ್ಕೆ ಕಾಲಿಸಿರಿಸುತ್ತಿದ್ದೇವೆ. ಕಳೆದು ಹೋದ ವರ್ಷದತ್ತ ಹಿನ್ನೋಟ ಹರಿಸಿದಾಗ ಹಲವು ಘಟನೆಗಳು ಕಣ್ಮುಂದೆ ಸುಳಿಯುತ್ತವೆ.
2018ರಲ್ಲಿ ಒಟ್ಟು ಒಂಬತ್ತು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆದಿದೆ. ಈ ಚುನಾವಣೆಗಳಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದದ್ದು ಒಂದು ರಾಜ್ಯದಲ್ಲಿ ಮಾತ್ರ. ಮತ್ತೊಂದು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದೊಂದಿಗೆ ಮೈತ್ರಿ ಸರ್ಕಾರ ರಚಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ಒಂದು ರಾಜ್ಯದಲ್ಲಿ ಹೀನಾಯ ಸೋಲು ಕಂಡಿದೆ. ಕರ್ನಾಟಕದಲ್ಲಿ ಅಧಿಕಾರದಿಂದ ಕೆಳಗಿಳಿದ ಕಾಂಗ್ರೆಸ್, ಜೆಡಿಎಸ್ ಜತೆಗೆ ಮೈತ್ರಿ ಸರ್ಕಾರ ರಚಿಸಿಕೊಂಡಿದೆ. ಆದರೆ ಉತ್ತರ ಭಾರತದ ಮೂರು ದೊಡ್ಡ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಆದರೆ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಮೇಲುಗೈ ಸಾಧಿಸಿವೆ
ಉಪಚುನಾವಣೆಗಳಲ್ಲೂ ಮುಗ್ಗರಿಸಿದ ಬಿಜೆಪಿ
ವಿವಿಧ ರಾಜ್ಯಗಳ ಹಲವು ಲೋಕಸಭಾ ಕ್ಷೇತ್ರಗಳಿಗೆ 2018ರಲ್ಲಿ ಉಪಚುನಾವಣೆ ನಡೆಯಿತು. ಈ ಚುನಾವಣೆಗಳಲ್ಲಿ ಬಿಜೆಪಿ ಹಲವು ಸ್ಥಾನಗಳನ್ನು ಕಳೆದುಕೊಂಡಿತು
* 13 ಚುನಾವಣೆ ನಡೆದ ಕ್ಷೇತ್ರಗಳು
ಚುನಾವಣೆಗೂ ಮುನ್ನ
9 ಬಿಜೆಪಿ ಹೊಂದಿದ್ದ ಸ್ಥಾನಗಳು
4 ಪ್ರಾದೇಶಿಕ ಪಕ್ಷಗಳ ಸ್ಥಾನಗಳು
ಚುನಾವಣೆ ನಂತರ
8 ಪ್ರಾದೇಶಿಕ ಪಕ್ಷಗಳು ಗೆದ್ದ ಸ್ಥಾನಗಳು
3 ಕಾಂಗ್ರೆಸ್ ಗೆದ್ದ ಸ್ಥಾನಗಳು
2 ಬಜೆಪಿ ಉಳಿಸಿಕೊಂಡ ಸ್ಥಾನಗಳು
ಆಧಾರ: ಚುನಾವಣಾ ಆಯೋಗ
* ಇವನ್ನೂ ಓದಿ...
*ಹಿನ್ನೋಟ 2018: ನೆನಪುಗಳನ್ನು ಬಿಟ್ಟು ಹೋದವರು...
*ಹಿನ್ನೋಟ 2018: ಸಿಹಿ, ಕಹಿ ನೆನಪುಗಳನ್ನು ಉಳಿಸಿಹೋದ ವರುಷ
* ಹಿನ್ನೋಟ 2018: ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪುಗಳು
*ಹಿನ್ನೋಟ 2018: ಹೈಕೋರ್ಟ್ ಅಂಗಳದಲ್ಲಿ....
*ಹಿನ್ನೋಟ 2018: ವಿದೇಶ ವಿದ್ಯಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.