ನವದೆಹಲಿ: ಪೂರ್ವ ನೇಪಾಳದ ಹಿಮಾಲಯ ಭಾಗದಲ್ಲಿ ಹಿಮಮಾನವನ (ಯೇತಿ) ಹೆಜ್ಜೆಗುರುತುಗಳನ್ನು ನೋಡಿದ್ದಾಗಿಭಾರತೀಯ ಸೇನೆ ಟ್ವೀಟ್ ಮಾಡಿದೆ.
ಸೇನೆ ಹಿಮದಲ್ಲಿ ಮೂಡಿರುವ ಹೆಜ್ಜೆಗಳ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿ, ‘ಇದೇಮೊದಲ ಬಾರಿ ಭಾರತೀಯ ಸೇನೆಯ ಪರ್ವತಾರೋಹಿಗಳ ತಂಡ ಯೇತಿ ಅಥವಾ ತುಂಬು ಕೂದಲಿನ ಹಿಮಮಾನವನ ಹೆಜ್ಜೆ ಗುರುತುಗಳನ್ನು ನೋಡಿದೆ. ಹೆಜ್ಜೆಗಳ ಅಳತೆ32X15 ಇಂಚುಇದೆ ಎಂದು ಹೇಳಿದೆ. ಏಪ್ರಿಲ್ 9ರಂದು ಮಾಕ್ಲು ಬೇಸ್ ಕ್ಯಾಂಪ್ ಸಮೀಪ ಈ ಹೆಜ್ಜೆಗುರುತು ಕಂಡುಬಂದಿದೆ’ ಎಂದು ಹೇಳಿದ್ದಾರೆ.
ಸೇನೆಯ ಈ ಟ್ವೀಟ್‌ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ ಹಾಕಲು ಬಂದಿದೆ ಎಂದು ವ್ಯಂಗ್ಯ ಮಾಡಿದ್ದಾರೆ.ಅಜಿತ್ ಮ್ಯಾಥ್ಯು ಎನ್ನುವವರು ‘ಚೌಕಿದಾರ್ ಯೇತಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
‘ಯೇತಿ’ಮಂಗಮಾನವನ ಸ್ವರೂಪದ ಪ್ರಾಣಿ. ಇದು,ನೇಪಾಳ ಮತ್ತು ಟಿಬೆಟ್‌ನ ಹಿಮಾಲಯ ಪರ್ವತ ಪ್ರದೇಶದಲ್ಲಿ ನೆಲೆಸಿತ್ತು ಎಂದು ಹೇಳಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.