ADVERTISEMENT

‘ಮಹಾ ವಿಕಾಸ್‌ ಆಘಾಡಿ’ ಅಲ್ಲ ಮಹಾ ಮೂರ್ಖರ ಕೂಟ: ಯೋಗಿ ಆದಿತ್ಯನಾಥ

ಪಿಟಿಐ
Published 6 ನವೆಂಬರ್ 2024, 15:27 IST
Last Updated 6 ನವೆಂಬರ್ 2024, 15:27 IST
<div class="paragraphs"><p>ಯೋಗಿ ಆದಿತ್ಯನಾಥ</p></div>

ಯೋಗಿ ಆದಿತ್ಯನಾಥ

   

ಮುಂಬೈ: ‘ಕಾಂಗ್ರೆಸ್‌ ನೇತೃತ್ವದ ಮಹಾ ವಿಕಾಸ್‌ ಆಘಾಡಿಯನ್ನು ‘ಮಹಾ ಮೂರ್ಖರ ಕೂಟ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟೀಕಿಸಿದ್ದಾರೆ.

ಮಹಾರಾಷ್ಟ್ರದ ವಿದರ್ಭ ಪ್ರದೇಶದ ವಾಶಿಮ್‌ನಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದ ಅವರು, ‘ಮಹಾ ವಿಕಾಸ್‌ ಆಘಾಡಿಯನ್ನು ನಾನು ಮಹಾ ಮೂರ್ಖರ ಕೂಟ ಎನ್ನುವೆ. ಏಕೆಂದರೆ ಅವರು ಧರ್ಮ ಮತ್ತು ದೇಶದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಕಾಂಗ್ರೆಸ್‌ ಎಂದಾದರೂ ಭಾರತ ಹಾಗೂ ಭಾರತೀಯತೆಯ ಬಗ್ಗೆ ಪ್ರಾಮಾಣಿಕವಾಗಿ ಯೋಚಿಸಿದೆಯೇ‘ ಎಂದು ಪ್ರಶ್ನಿಸಿದರು.

ಒಗ್ಗಟ್ಟಾಗಿರಿ: ಛತ್ರಪತಿ ಶಿವಾಜಿ ಮಹಾರಾಜರ ‘ಒಗ್ಗಟ್ಟಾಗಿರಿ’ ಎಂಬ ಸಂದೇಶವು ಇಂದಿಗೂ ಪ್ರಸ್ತುತವಾಗಿದೆ ಎಂದೂ ಯೋಗಿ ಆದಿತ್ಯನಾಥ ಹೇಳಿದರು.

‘ಶಿವಾಜಿ ಮಹಾರಾಜರು ನಮ್ಮೆಲ್ಲರನ್ನೂ ಒಂದುಗೂಡಿಸಿದರು. ಅವರಿಂದ ಸ್ಫೂರ್ತಿ ಪಡೆದು, ಛತ್ರಪತಿಯ ಸಂದೇಶವನ್ನು ಪಾಲಿಸುವಂತೆ ನಿಮ್ಮೆಲ್ಲರನ್ನೂ ಪದೇ ಪದೇ ಒತ್ತಾಯಿಸುವೆ’ ಎಂದರು.

‘ಹೊಸ ಸರ್ಕಾರಗಳು ರಚನೆಯಾಗುತ್ತಿರುತ್ತವೆ. ಆದರೆ ನಮ್ಮ ಭಾರತವು ವಿಶ್ವದ ಅತಿದೊಡ್ಡ ಶಕ್ತಿಯಾಗಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.