ADVERTISEMENT

ಇ.ಡಿ ವಿಚಾರಣೆಗೆ ಹಾಜರಾದ ಎಲ್ವಿಶ್‌ ಯಾದವ್‌

ಪಿಟಿಐ
Published 23 ಜುಲೈ 2024, 16:51 IST
Last Updated 23 ಜುಲೈ 2024, 16:51 IST
..
..   

ಲಖನೌ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್‌ ಸಿದ್ಧಾರ್ಥ್ ಯಾದವ್‌ ಅಲಿಯಾಸ್‌ ಎಲ್ವಿಶ್‌ ಯಾದವ್‌ ಅವರು ಮಂಗಳವಾರ ಜಾರಿ ನಿರ್ದೇಶನಾಲಯದ(ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಪ್ರಕರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಇ.ಡಿಯು ಎಲ್ವಿಶ್ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ಎಲ್ವಿಶ್‌ ಯಾದವ್‌ ಮತ್ತು ಅವರ ಇತರ 6 ಜನರ ವಿರುದ್ಧ ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಪೊಲೀಸರು ಕಳೆದ ವರ್ಷ ನವೆಂಬರ್‌ 3ರಂದು ಎಫ್‌ಐಆರ್‌ ದಾಖಲಿಸಿ, ಬಳಿಕ 1200 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಈ ಸಂಬಂಧ ಇ.ಡಿಯು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ದೂರು ದಾಖಲಿಸಿಕೊಂಡಿತ್ತು.

ADVERTISEMENT

ಜುಲೈ ಎರಡನೇ ವಾರವೇ ಎಲ್ವಿಶ್‌ ಅವರಿಗೆ ಸಮನ್ಸ್‌ ಜಾರಿಯಾಗಿತ್ತು, ಆದರೆ ವಿದೇಶಿ ಪ್ರವಾಸ ಮತ್ತು ವೈಯುಕ್ತಿಕ ಕಾರಣಕ್ಕಾಗಿ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದರು.

ಹರಿಯಾಣದ ಮೂಲದ ಗಾಯಕ ರಾಹುಲ್ ಯಾದವ್‌ ಅಲಿಯಾಸ್‌ ರಾಹುಲ್ ಫಝಿಲ್‌ಪುರಿಯ ಅವರನ್ನು ವಿಚಾರಣೆ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.