ADVERTISEMENT

ಯುವರಾಜ್‌ ಸಿಂಗ್‌ ಪ್ರತಿಷ್ಠಾನದಿಂದ 100 ಹಾಸಿಗೆಗಳ ಮಕ್ಕಳ ಐಸಿಯು ಘಟಕ

ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದಿಗೆ ಒಡಂಬಡಿಕೆಗೆ ಸಹಿ

ಪಿಟಿಐ
Published 17 ಜುಲೈ 2021, 9:39 IST
Last Updated 17 ಜುಲೈ 2021, 9:39 IST
ಪ್ರಾತಿನಿದಿಕ ಚಿತ್ರ
ಪ್ರಾತಿನಿದಿಕ ಚಿತ್ರ   

ದಿಬ್ರುಗಡ: ಕೋವಿಡ್‌–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಯುವರಾಜ್‌ ಸಿಂಗ್‌ ಫೌಂಡೇಷನ್‌ ಅಸ್ಸಾಂ ಆಸ್ಪತ್ರೆಯಲ್ಲಿ 100 ಹಾಸಿಗೆ ಸಾಮರ್ಥ್ಯದ ಮಕ್ಕಳ ಐಸಿಯು ಘಟಕ ಸ್ಥಾಪಿಸುವ ಕುರಿತು ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಂದಿಗೆ (ಎಎಂಸಿಎಚ್‌) ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ.

ಖ್ಯಾತ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರ ಈ ಪ್ರತಿಷ್ಠಾನವು, ಮೊದಲ ಕಂತಿನಲ್ಲಿ ಆಸ್ಪತ್ರೆಗೆ 50 ಹಾಸಿಗೆಗಳ ಘಟಕವನ್ನು ಪೂರೈಸಲಿದೆ ಎಂದು ಎಎಂಸಿಎಚ್‌ ಕಾಲೇಜಿನ ಪ್ರಾಚಾರ್ಯ ಮತ್ತು ಸೂಪರಿಂಟೆಂಡ್‌ ಸಂಜೀಬ್‌ ಕಾಕತಿ ತಿಳಿಸಿದ್ದಾರೆ.

‌ಮಕ್ಕಳ ಐಸಿಯುನ 100 ಹಾಸಿಗೆಗಳಲ್ಲಿ, 20 ಪೂರ್ಣ ಪ್ರಮಾಣದ ವೆಂಟಿಲೇಟರ್‌ಯುಕ್ತ ಘಟಕಗಳಾಗಿರಲಿವೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.