ADVERTISEMENT

ಮಹಾರಾಷ್ಟ್ರ ಚುನಾವಣೆ: ಹತ್ಯೆಯಾದ ಬಾಬಾ ಸಿದ್ದಿಕಿ ಮಗನಿಗೆ ಮುಂಬೈನಲ್ಲಿ ಸೋಲು

ಮಾಜಿ ಸಚಿವ ಹಾಗೂ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಬಾಬಾ ಸಿದ್ದಿಕಿ ಅವರ ಮಗ ಜಿಶಾನ್ ಸಿದ್ದಿಕಿ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 13:43 IST
Last Updated 23 ನವೆಂಬರ್ 2024, 13:43 IST
<div class="paragraphs"><p>ಜಿಶಾನ್ ಸಿದ್ದಿಕಿ</p></div>

ಜಿಶಾನ್ ಸಿದ್ದಿಕಿ

   

ಬೆಂಗಳೂರು: ಮಾಜಿ ಸಚಿವ ಹಾಗೂ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಬಾಬಾ ಸಿದ್ದಿಕಿ ಅವರ ಮಗ ಜಿಶಾನ್ ಸಿದ್ದಿಕಿ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.

ಅವರು ಮುಂಬೈನ ವಾಂಡ್ರೆ ಪೂರ್ವ ವಿಧಾನಸಭೆ ಕ್ಷೇತ್ರದಿಂದ ಎನ್‌ಸಿಪಿ ಅಜಿತ್ ಪವಾರ್ ಬಣದ ಪಕ್ಷದಿಂದ ಸ್ಪರ್ಧಿಸಿದ್ದರು.

ADVERTISEMENT

ಈ ಕ್ಷೇತ್ರದಲ್ಲಿ ಶಿವಸೇನಾ ಯುಬಿಟಿ ಪಕ್ಷದಿಂದ ಉದ್ಧವ್ ಠಾಕ್ರೆ ಅವರ ಅಳಿಯ ವರುಣ್ ಸರ್‌ದೇಸಾಯಿ ಅವರು ವಿಜಯ ಸಾಧಿಸಿದ್ದಾರೆ.

ವರುಣ್ ಸರ್‌ದೇಸಾಯಿ ವಿರುದ್ಧ ಜಿಶಾನ್ ಸಿದ್ದಿಕಿ 11 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ವರುಣ್ 57 ಸಾವಿರ ಮತ ಪಡೆದಿದ್ದಾರೆ.

ಮಹರಾಷ್ಟ್ರ ಸರ್ಕಾರದ ಮಾಜಿ ಸಚಿವ ಹಾಗೂ ರಾಜಕಾರಣ, ಬಾಲಿವುಡ್‌ನಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಬಾಬಾ ಸಿದ್ದಿಕಿ ಅವರನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹಚರರು ಎನ್ನಲಾದ ವ್ಯಕ್ತಿಗಳು ಇತ್ತೀಚೆಗೆ ಮುಂಬೈನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಸೋಲಿನ ಬಗ್ಗೆ ಮಾತನಾಡಿರುವ ಜಿಶಾನ್ ಸಿದ್ದೀಕಿ, ‘ನನ್ನ ತಂದೆನ್ನು ಕಳೆದುಕೊಂಡಿರುವ ನನಗೆ ಎಲ್ಲವೂ ನಗಣ್ಯ. ಆದರೂ ನಾನು ಗೆಲುವಿಗೆ ಸಾಕಷ್ಟು ಹೋರಾಟ ಮಾಡಿದ್ದೆ’ ಎಂದು ಮಾಧ್ಯಮಗಳಿಗೆ ತಿಳಿಸಿರುವುದಾಗಿ ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.