ADVERTISEMENT

ಪುಣೆ: ಝೀಕಾ ವೈರಸ್‌ನ ಮತ್ತೆರಡು ಪ್ರಕರಣಗಳು ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜುಲೈ 2024, 8:03 IST
Last Updated 2 ಜುಲೈ 2024, 8:03 IST
ಝೀಕಾ
ಝೀಕಾ   

ಪುಣೆ: ಮಹಾರಾಷ್ಟ್ರದ ಪುಣೆ ನಗರದಲ್ಲಿ ಝೀಕಾ ವೈರಸ್‌ನ ಹರಡುವಿಕೆ ಮುಂದುವರಿದಿದ್ದು, ಸೋಮವಾರ ಮತ್ತೆರಡು ಪ್ರಕರಣಗಳು ವರದಿಯಾಗಿವೆ.

ಈ ವರೆಗೆ ನಗರದಲ್ಲಿ ಝೀಕಾ ವೈರಸ್ ಸೋಂಕಿತರ ಸಂಖ್ಯೆ 6ಕ್ಕೆ ಏರಿದೆ.

ಎರಂಡ್ವಾನೆ ಪ್ರದೇಶದಲ್ಲಿ ಗರ್ಭಿಣಿ ಮತ್ತು 22 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ADVERTISEMENT

ಇದೇ ಪ್ರದೇಶದಲ್ಲಿ ವಾಸವಿರುವ ವೈದ್ಯ ಮತ್ತು ಅವರ ಹದಿಹರೆಯದ ಮಗಳಿಗೆ ಝೀಕಾ ವೈರಸ್ ತಗುಲಿತ್ತು. ಇದು ಪುಣೆಯ ಮೊದಲ ಪ್ರಕರಣವಾಗಿತ್ತು.

ಈ ಇಬ್ಬರ ಪ್ರಯೋಗಾಲಯ ಮಾದರಿ ಪರೀಕ್ಷೆಯಲ್ಲಿ ಝೀಕಾ ವೈರಸ್ ಪಾಸಿಟಿವ್ ಬಂದ ಬಳಿಕ ಈ ಪ್ರದೇಶದ ಹಲವರನ್ನು ತಪಾಸಣೆಗೆ ಒಳಪಡಿಸಿದ್ದ ಆರೋಗ್ಯ ಇಲಾಖೆ, ಅವರ ಪ್ರಯೋಗಾಲಯ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಿತ್ತು.

‘25 ಪ್ರಯೋಗಾಲಯ ಮಾದರಿಯಲ್ಲಿ 12 ಅನ್ನು ಎರಂಡ್ವಾನೆಯಿಂದ ಪಡೆಯಲಾಗಿದೆ. ಇದರಲ್ಲಿದ್ದ 7 ಮಂದಿ ಗರ್ಭಿಣಿಯರ ಪೈಕಿ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಮುಂಧ್ವಾದಿಂದ ಪಡೆದ 13 ಸ್ಯಾಂಪಲ್‌ಗಳಲ್ಲಿ ಯಾವುದೇ ಗರ್ಭಿಣಿ ಮಹಿಳೆ ಇಲ್ಲ’ಎಂದು ಪುಣೆ ಕಾರ್ಪೊರೇಶನ್‌ನ ಆರೋಗ್ಯ ಅಧಿಕಾರಿ ಡಾ. ಕಲ್ಪನಾ ಬಲಿವಂತ್ ತಿಳಿಸಿದ್ದಾರೆ.

ಝೀಕಾ ಸೋಂಕಿತ ಗರ್ಭಿಣಿಯರನ್ನು ಹೈ ರಿಸ್ಕ್ ಕೆಟಗರಿ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಎರಡು ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕಣ್ಗಾವಲು ಇರಿಸಿದ್ದಾರೆ.

ಸೋಂಕಿನ ವ್ಯಾಪಕ ಹರಡುವಿಕೆ ತಡೆಗೆ ಕ್ಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.