ಜಬಲ್‌ಪುರ್, ಮಧ್ಯಪ್ರದೇಶ: ಹಿಂದೂ ಅಲ್ಲದ ಡೆಲಿವರಿ ಹುಡುಗನಿಂದ ಆಹಾರ ಪೊಟ್ಟಣ ಪಡೆಯುವುದಿಲ್ಲ ಎನ್ನುವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಜೊಮ್ಯಾಟೊ ಗ್ರಾಹಕ ಅಮಿತ್ ಶುಕ್ಲಾಗೆ ಧರ್ಮದ ಹೆಸರಿನಲ್ಲಿ ದ್ವೇಷ ಹರಡದಂತೆ ಎಚ್ಚರಿಸಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಈ ಬಗ್ಗೆ ಅಮಿತ್ ಶುಕ್ಲಾನಿಂದ ಪೊಲೀಸರು ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಂಡಿದ್ದಾರೆ.
ಘಟನೆ ಕುರಿತು ಜೊಮ್ಯಾಟೊ ಡೆಲಿವರಿ ಹುಡುಗ ಫಯಾಜ್, ‘ಮನಸಿಗೆ ನೋವಾಯಿತು. ಆದರೆ, ಏನು ಮಾಡು ವುದು?’ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.