ADVERTISEMENT

'ಅಲ್ಲಾರೀ..ರಾಷ್ಟ್ರಪತಿಗಳಿಗೆ ನಾವು ಭಾಷಣ ಬರೆದುಕೊಡಾಕಾಗುತ್ತಾ? ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 13:01 IST
Last Updated 25 ಅಕ್ಟೋಬರ್ 2017, 13:01 IST
'ಅಲ್ಲಾರೀ..ರಾಷ್ಟ್ರಪತಿಗಳಿಗೆ ನಾವು ಭಾಷಣ ಬರೆದುಕೊಡಾಕಾಗುತ್ತಾ? ಸಿದ್ದರಾಮಯ್ಯ
'ಅಲ್ಲಾರೀ..ರಾಷ್ಟ್ರಪತಿಗಳಿಗೆ ನಾವು ಭಾಷಣ ಬರೆದುಕೊಡಾಕಾಗುತ್ತಾ? ಸಿದ್ದರಾಮಯ್ಯ   

ಬೆಂಗಳೂರು: ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರಿಗೆ ರಾಜ್ಯ ಸರ್ಕಾರವೇ ಭಾಷಣ ಬರೆದು ಕೊಟ್ಟಿದೆ ಎಂಬ ಬಿಜೆಪಿ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.

ರಾಷ್ಟ್ರಪತಿ ಅವರಿಗೆ ಸರ್ಕಾರ ಭಾಷಣವನ್ನು ಬರೆದುಕೊಟ್ಟಿದ್ದು ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರನ್ನು ಸೇರಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಕೇಳಿದಾಗ ‘ಬಿಜೆಪಿಯವರು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು  ಕಿಡಿ ಕಾರಿದ್ದಾರೆ.

'ಅಲ್ಲಾರೀ..ರಾಷ್ಟ್ರಪತಿಗಳಿಗೆ ನಾವು ಭಾಷಣ ಬರೆದುಕೊಡಾಕಾಗುತ್ತಾ? ರಾಷ್ಟ್ರಪತಿಗಳೇ ಭಾಷಣವನ್ನು ಸಿದ್ಧಪಡಿಸಿಕೊಂಡು ಬಂದು ಓದಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.  ಅವರು ಕರ್ನಾಟಕ ಇತಿಹಾಸದಲ್ಲಿ ನಡೆದ ಸತ್ಯವನ್ನೇ ಹೇಳಿದ್ದಾರೆ. ಆದರೆ  ಬಿಜೆಪಿಯವರು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದರು. ಇದು ಜಂಟಿ ಅಧಿವೇಶನದ ಭಾಷಣ ಅಲ್ಲ, ಹಾಗಾಗಿ ಸರ್ಕಾರ ಭಾಷಣ ಬರೆದುಕೊಡಲು ಸಾಧ್ಯವಿಲ್ಲ ಎಂದರು.

ADVERTISEMENT

ಯಡಿಯೂರಪ್ಪಗೆ ಎಷ್ಟು ನಾಲಿಗೆ ?
'ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಏನು ಹೇಳಿದ್ದರು ನೆನಪಿದೆಯಾ? ಟಿಪ್ಪು ಜಯಂತಿ ಆಚರಿಸಿ ತಲೆಗೆ ಟಿಪ್ಪು ಪೇಟಾ ಧರಿಸಿ, ಖಡ್ಕ ಹಿಡಿದು ಅಲ್ಲಾಹು ಸಾಕ್ಷಿಯಾಗಿ ನಾನು ಬಿಜೆಪಿಗೆ ಹೋಗುವುದಿಲ್ಲ  ಎಂದಿದ್ದರು. ಅವರಿಗೆ ಒಂದು ನಾಲಿಗೆಯಾ, ಎರಡು ನಾಲಿಗೆಯಾ ಎಂದು ಲೇವಡಿ ಮಾಡಿದರು.  ಜಗದೀಶ್‌ ಶೆಟ್ಟರ್‌ ವಿರುದ್ಧ ಕಿಡಿ ಕಾರಿದ ಸಿದ್ದರಾಮಯ್ಯ ಟಿಪ್ಪು ಕುರಿತಾದ ಪುಸ್ತಕಕ್ಕೆ ಜಗದೀಶ್ ಶೆಟ್ಟರ್‌ ಅವರೇ ಮುನ್ನುಡಿ ಬರೆದಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.