ಸಾಗರ: ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆ ಪ್ರತಿ ವರ್ಷ ಆಯೋಜಿಸುವ ಸಂಸ್ಕೃತಿ ಶಿಬಿರ ಈ ಬಾರಿ ಅಕ್ಟೋಬರ್ 8ರಿಂದ 12ರವರೆಗೆ ನಡೆಯಲಿದೆ.
ಶಿಬಿರದಲ್ಲಿ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕತಿಕ ಮಾಧ್ಯಮಗಳ ಸ್ವರೂಪ, ಪರಸ್ಪರ ಸಂಬಂಧ, ಒಟ್ಟೂ ಸಮಾಜದೊಂದಿಗೆ ಸಂಸ್ಕೃತಿಯ ಸಂಬಂಧ, ಇವೇ ಮೊದಲಾದ ವಿಷಯಗಳ ಕುರಿತು ಉಪನ್ಯಾಸ, ಚರ್ಚೆ, ಪ್ರಾತ್ಯಕ್ಷಿಕೆ ನಡೆಯಲಿವೆ.
ದೇಶದ ವಿವಿಧ ಭಾಗಗಳ ಚಿಂತಕರು ಉಪನ್ಯಾಸ ಹಾಗೂ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ದಿನ ಸಂಜೆ ನಾಟಕ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕರ್ತರು, ಶಿಕ್ಷಕರು, ಪತ್ರಕರ್ತರು, ವಿದ್ಯಾರ್ಥಿಗಳು, ಗ್ರಾಮೀಣ ಭಾಗದ ಆಸಕ್ತರಿಗೆ ಶಿಬಿರಾರ್ಥಿಗಳಾಗಿ ಪಾಲ್ಗೊಳ್ಳಲು ಆದ್ಯತೆ ನೀಡಲಾಗುತ್ತದೆ.
ಶಿಬಿರದ ಶುಲ್ಕ ಊಟ ಹಾಗೂ ವಸತಿ ಸೇರಿ ವಿದ್ಯಾರ್ಥಿಗಳಿಗೆ ₹ 2,500 ಆಗಿದ್ದು, ಉಳಿದವರಿಗೆ ₹ 3,000. ಆಸಕ್ತರು ನೀನಾಸಂ ಸಂಸ್ಕೃತಿ ಶಿಬಿರ, ಹೆಗ್ಗೋಡು, ಸಾಗರ–577417 ಈ ವಿಳಾಸಕ್ಕೆ ಪತ್ರ ಬರೆದು ಪ್ರವೇಶ ಪತ್ರಗಳನ್ನು ತರಿಸಿಕೊಂಡು ಸೆಪ್ಟೆಂಬರ್ 15ರೊಳಗೆ ತಲುಪಿಸತಕ್ಕದ್ದು.
www.ninasam.org ಈ ವಿಳಾಸದಿಂದ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಆನ್‌ಲೈನ್ ಮೂಲಕವೂ ನೋಂದಣಿ ಮಾಡಿಸಬಹುದು ಎಂದು ನೀನಾಸಂ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.