ಸಂತೇಬೆನ್ನೂರು: ‘ರಾಜ್ಯದ ಜನ ಬಿಜೆಪಿಗೆ 104 ಸ್ಥಾನಗಳನ್ನು ಕೊಟ್ಟು ಆಶೀರ್ವಾದ ಮಾಡಿದ್ದರು. ಕೇವಲ 8 ಸ್ಥಾನಗಳ ಕೊರತೆಯಿಂದ ಸರ್ಕಾರ ರಚಿಸಲು ಆಗಲಿಲ್ಲ. ಈ ಸರ್ಕಾರ ಎಷ್ಟು ದಿವಸ ಇರುತ್ತದೆ ಕಾದು ನೋಡೋಣ’ ಎಂದು ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇಲ್ಲಿನ ಹೆಲಿಪ್ಯಾಡ್‍ನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
‘ಬಿಜೆಪಿ ಸ್ಪಷ್ಟ ಬಹುಮತದತ್ತ ಸಾಗಿ ಹಿನ್ನಡೆ ಕಂಡಿತು. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ 150 ಸ್ಥಾನ ಗೆಲ್ಲುತ್ತೇವೆ. ಒಂದೆರಡು ದಿನಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತೇನೆ. ಏನೆಲ್ಲ ನಡೀತು ಎಂಬುದನ್ನು ಜನರಿಗೆ ತಿಳಿಸುವೆ’ ಎಂದರು.
‘ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆ ಸಾಧ್ಯವಾಗಲಿಲ್ಲ ಎಂದು ಲಕ್ಷಾಂತರ ಜನರಿಗೆ ನೋವಾಗಿದೆ. ಇದನ್ನೇ ಗಂಭೀರವಾಗಿ ತೆಗೆದುಕೊಂಡು ಹುಣಸೇಮರದ ಚನ್ನಬಸಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಇಲ್ಲಿಗೆ ಬಂದಿದ್ದೇನೆ. ಅಭಿಮಾನಿಗಳು ಸಂಯಮದಿಂದ ಇರಿ, ದುಡುಕಬೇಡಿ’ ಎಂದು ಮನವಿ ಮಾಡಿದರು.
ಸಚಿವ ಸ್ಥಾನದ ಹಂಚಿಕೆಗಾಗಿ ಕಾಂಗ್ರೆಸ್– ಜೆಡಿಎಸ್ ಕಸರತ್ತು ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ‘ಈಗಲೇ ಆ ಬಗ್ಗೆ ಏನನ್ನೂ ಹೇಳುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.