ಮಂಗಳೂರು: ‘ಭಾಷೆ ಕೆಟ್ಟು ಹೋಗುತ್ತಿದೆ. ಅದರ ಬಗೆಗಿನ ಸಂಕಟ ಯಾರ ಬಳಿ ಹೇಳಬೇಕು. ಅನಂತಮೂರ್ತಿ ಇದನ್ನೇ ಮಾತು ಸೋಲುತ್ತಿದೆ ಎಂದಿದ್ದು. ಪರಸ್ಪರ ಕೆರಳಿಸುವ ಭಾಷೆಯನ್ನೇ ಎಲ್ಲರೂ ಬಳಸುತ್ತಿದ್ದಾರೆ. ಎಲ್ಲರೂ ಒಪ್ಪುವಂತಹ ಭಾಷೆಯನ್ನು ಸೃಷ್ಟಿಸಬೇಕು. ಗಾಂಧಿಗೆ ಅದು ಸಾಧ್ಯವಾಗಿತ್ತು’ ಎಂದು ಲೇಖಕಿ ವೈದೇಹಿ ಹೇಳಿದರು.
ಮಂಗಳೂರಿನ ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿರೋಧ ಮಾಡುವವರೆಲ್ಲ ಇರಲೇಬಾರದು ಎಂಬ ಭಾವನೆ ಬಲವಾಗಿ ಬೇರೂರುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಬರಹಗಾರರು ಸುಲಭವಾಗಿ ಏನನ್ನೂ ಬರೆಯಲು ಆಗದ ಸ್ಥಿತಿ ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ‘ಪ್ರಜಾವಾಣಿ’ಯ ಸಹ ಸಂಪಾದಕ ಎಂ. ನಾಗರಾಜ್, ಮಂಗಳೂರು ಬ್ಯೂರೋ ಮುಖ್ಯಸ್ಥ ಎಂ.ಜಿ. ಬಾಲಕೃಷ್ಣ, ಮುಖ್ಯ ಉಪ ಸಂಪಾದಕಿ ಶೈಲಜಾ ಹೂಗಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.