ಧಾರವಾಡ: ಇಲ್ಲಿನ ಸಾಶ್ರೀಕುಮಾವು ಪ್ರತಿಷ್ಠಾನವು ‘ಜನರಲ್ ತಿಮ್ಮಯ್ಯ ಸೈನಿಕ ಕಥಾ ಸ್ಪರ್ಧೆ’ಗೆ ಕಥೆಗಳನ್ನು ಆಹ್ವಾನಿಸಿದೆ.
ಯುದ್ಧ, ರಾಷ್ಟ್ರೀಯ ಸ್ಮಾರಕ, ಸೈನ್ಯ, ಸೈನಿಕರ ಜೀವನದ ಕುರಿತಾದ ಕಥೆಗಳಲ್ಲಿ ಅತ್ಯುತ್ತಮವಾದುದಕ್ಕೆ ಬಹುಮಾನ ನೀಡಲಾಗುತ್ತದೆ.
ಕಥಾ ವಸ್ತು ಸೇನೆ ಹಾಗೂ ದೇಶದ ರಕ್ಷಣೆ ಕುರಿತಾಗಿಯೇ ಇರಬೇಕು ಎಂಬುದು ಸ್ಪರ್ಧೆಯ ನಿಯಮ. ಕಥೆಗಳು ಮೂರು ಸಾವಿರ ಪದಗಳನ್ನು ಮೀರಿರಬಾರದು. ಮೊದಲ ಹಾಗೂ ದ್ವಿತೀಯ ಬಹುಮಾನ ಪಡೆದವರಿಗೆ ಕ್ರಮವಾಗಿ ₹5,000, ₹3,000 ನಗದು ಪುರಸ್ಕಾರ ನೀಡಲಾಗುತ್ತದೆ.
ಕೊನೆಯ ದಿನಾಂಕ ಈ ತಿಂಗಳ 28. ವಿಳಾಸ: ಎಸ್.ಸಿ. ಸರದೇಶಪಾಂಡೆ, 6ನೇ ಅಡ್ಡ ರಸ್ತೆ, ಮಾಳಮಡ್ಡಿ, ಧಾರವಾಡ– 580007.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.