ADVERTISEMENT

ಕಮಲಾಹಂಪನಾ, ಪ್ರಕಾಶ್‌ರೈ ಸಹಿತ ಏಳು ಗಣ್ಯರಿಗೆ ‘ಸಂದೇಶ’ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2016, 19:30 IST
Last Updated 21 ಡಿಸೆಂಬರ್ 2016, 19:30 IST
ಕಮಲಾ
ಕಮಲಾ   

ಮಂಗಳೂರು: ಇಲ್ಲಿನ ಸಂದೇಶ ಫೌಂಡೇಷನ್‌ ಫಾರ್‌ ಕಲ್ಚರ್‌ ಆಂಡ್‌ ಎಜುಕೇಶನ್‌ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ‘ಸಂದೇಶ’ ಪ್ರಶಸ್ತಿಗೆ ಈ ಬಾರಿ ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ, ನಟ ಪ್ರಕಾಶ್‌ ರೈ ಸಹಿತ ಏಳು ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಕನ್ನಡ, ಕೊಂಕಣಿ ಹಾಗೂ ತುಳು ಸಾಹಿತ್ಯ–ಸಂಸ್ಕೃತಿಗೆ ಹಾಗೂ ಸಮಾಜಕ್ಕೆ ವಿವಿಧ ಕೊಡುಗೆ ನೀಡುತ್ತಾ ಬಂದಿರುವ ನಾಡಿನ ಹಿರಿಯ ಸಾಹಿತಿ, ಕಲಾವಿದರ, ಶಿಕ್ಷಕ ಹಾಗೂ ಸಮಾಜ ಸೇವಕರನ್ನು ಗುರುತಿಸಿ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡುತ್ತಾ ಬರಲಾಗಿದೆ. ಕೆ. ಯುವರಾಜ್‌ (ಕಲೆ),  ಅನಿಲ್‌ ಪತ್ರಾವೊ (ಕೊಂಕಣಿ ಸಂಗೀತ), ಜಾನ್‌ ದೇವರಾಜ್‌ (ವಿಶೇಷ ಪ್ರಶಸ್ತಿ) ಮತ್ತು ಶಮಿತಾ ರಾವ್‌–ರೆನಿಟಾ ಲೋಬೊ (ಶಿಕ್ಷಣ) ಅವರು ಸಂದೇಶ ಪ್ರಶಸ್ತಿಗೆ ಆಯ್ಕೆಯಾದ ಇತರ ಗಣ್ಯರು ಎಂದು ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾದರ್‌ ವಿಕ್ಟರ್‌ ವಿಜಯ್‌ ಲೋಬೊ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರಶಸ್ತಿಯು ತಲಾ ₹ 10 ಸಾವಿರ ನಗದು ಒಳಗೊಂಡಿದೆ. ಜನವರಿ 13ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ, ಹಿರಿಯ ಸಾಹಿತಿ ನಾ.ಡಿಸೋಜ ನೇತೃತ್ವದ ಸಮಿತಿ ಈ ಆಯ್ಕೆ ನಡೆಸಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.