ADVERTISEMENT

ಕವಿ ಇಟಗಿ ಈರಣ್ಣ ನಿಧನ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 19:22 IST
Last Updated 13 ಮಾರ್ಚ್ 2017, 19:22 IST
ಕವಿ ಇಟಗಿ ಈರಣ್ಣ ನಿಧನ
ಕವಿ ಇಟಗಿ ಈರಣ್ಣ ನಿಧನ   

ಶಿವಮೊಗ್ಗ: ಕನ್ನಡ ಶಾಯರಿ ಕವಿ ಇಟಗಿ ಈರಣ್ಣ (68) ಭಾನುವಾರ ತಡರಾತ್ರಿ ನಿಧನರಾದರು.

ನಗರದ ಶಿವಪ್ಪನಾಯಕ ಬಡಾವಣೆಯ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದರು. ನಂತರ ಶಿವಮೊಗ್ಗದಲ್ಲಿ ನೆಲೆಸಿದ್ದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ADVERTISEMENT

ಉರ್ದು ಮತ್ತು ಪರ್ಶಿಯನ್‌ ಭಾಷಾಜ್ಞಾನ ಹೊಂದಿದ್ದ ಅವರು ಆ ಭಾಷೆಯ ಸಾಕಷ್ಟು ಶಾಯರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಸ್ಪರ್ಶ ಚಿತ್ರಕ್ಕಾಗಿ ಅವರು ಬರೆದ ‘ಚಂದಕ್ಕಿಂತ ಚಂದ ನೀನೆ ಸುಂದರ’ ಹಾಡು ಜನಪ್ರಿಯವಾಗಿತ್ತು.

‘ಕೇವಲ ನಾಲ್ಕು ದಿನಗಳ ಹಿಂದೆ (ಮಾರ್ಚ್‌ 8) ಅವರ ತಾಯಿ ನಿಧನರಾಗಿದ್ದರು. ಭಾನುವಾರ ಸ್ಮರಣೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ರಾತ್ರಿ ಊರಿಗೆ ಹೊರಟವರನ್ನು ಬಸ್‌ನಿಲ್ದಾಣದವರೆಗೂ ಕಳುಹಿಸಿ ಬಂದಿದ್ದರು. ರಾತ್ರಿಯವರೆಗೂ ಜತೆಯಲ್ಲೇ ಇದ್ದೆವು’ ಎಂದು ಅವರ ಅಂತಿಮ ವಿಧಿವಿಧಾನ ನೆರವೇರಿಸಿದ ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಮಾಹಿತಿ ನೀಡಿದರು.

ಮೃತರ ಅಂತ್ಯಕ್ರಿಯೆ ಮಂಡ್ಲಿಯ ವೀರಶೈವ ರುದ್ರಭೂಮಿಯಲ್ಲಿ ಮಧ್ಯಾಹ್ನ 3ಕ್ಕೆ ನೆರವೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.