ಮಡಿಕೇರಿ: ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ 2015–16 ಹಾಗೂ 2016–17ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈತಾಡಿಯ ಬಾಳೆಕುಟ್ಟಿರ ಪಿ. ಈರಪ್ಪ (ಬಾಳೋಪಾಟ್ ಹಾಡುಗಾರರು), ಮೂರ್ನಾಡು ಚೌರೀರ ಸೋಮಯ್ಯ ತಿಮ್ಮಯ್ಯ (ಸಂಗೀತ ವಿಭಾಗ), ತೋರ ಗ್ರಾಮದ ಕುಡಿಯರ ದೇವಕ್ಕಿ (ಉರ್‌ಟಿಕೊಟ್ಟ್ ಹಾಡುಗಾರರು), ಹಾಲುಗುಂದದ ಪುಗ್ಗೇರ ಕೆ.ಪೂವಮ್ಮ (ನೃತ್ಯ), ಪೊನ್ನಂಪೇಟೆಯ ಕುಟ್ಟಂಡ ರಾಜಾರಾಂ ಗಣಪತಿ (ವಾದ್ಯಗೋಷ್ಠಿ), ಕೆದಮಳ್ಳೂರು ಗ್ರಾಮದ ಬೀಕಚಂಡ ಎಂ.ಬಿದ್ದಪ್ಪ (ಕೊಡವ ಜನಪದ ಕಲಾವಿದ), ಕಕ್ಕಬೆ– ಕುಂಜಿಲ ಗ್ರಾಮದ ಉತ್ತುಕುಟ್ಟಡ ಸಿ.ತಿಮ್ಮ ಉಪ್ಪಚ (ಕೊಡವ ಒಡ್ಡೋಲಗ ಕಲಾವಿದ), ಬಿಟ್ಟಂಗಾಲದ ಪೊನ್ನಿರ ಗಗನ್ (ಪೀಚೆಕತ್ತಿ ತಯಾರಕರು, ಉರಗ ಪ್ರೇಮಿ), ಪೊರಾಡು ಗ್ರಾಮದ ಬಲ್ಯಮಿದೇರಿರ ಸಿ.ನಾಣಯ್ಯ (ಕೋಲಾಟ) ಅವರಿಗೆ ತಲಾ ₹ 50 ಸಾವಿರದ ಚೆಕ್ ಹಾಗೂ ವಾರ್ಷಿಕ ಪ್ರಶಸ್ತಿ ನೀಡಲಾಯಿತು.
ಪ್ರೊ.ಬೊವ್ವೇರಿಯಂಡ ಚೆಟ್ಟಿಚ್ಚ ಉತ್ತಯ್ಯ ಮತ್ತು ಬೊವ್ವೇರಿಯಂಡ ಉತ್ತಯ್ಯ ತಂಗಮ್ಮ (ಕೊಡವ ಅರಿವೋಲೆ), ಮೊಣ್ಣಂಡ ಶೋಭಾ ಸುಬ್ಬಯ್ಯ (ಪವಳ ಸಾಲ್ ಮತ್ತು ಪಾರುವ ಪಾಪಲಿ ಕೃತಿಗಳು), ಐತಿಚಂಡ ರಮೇಶ್ ಉತ್ತಪ್ಪ (ನಲ್ಲತಕ್ಕ್), ಅಮ್ಮಣಿಚಂಡ ಪ್ರವೀಣ್ ಚಂಗಪ್ಪ (ಪೊಂಬೊಳೆ ನೆಲ್ಲ್), ಹಂಚೇಟ್ಟಿರ ಫ್ಯಾನ್ಸಿ ಮುತ್ತಣ್ಣ (ಪಾರು ಕೃತಿ) ಅವರಿಗೆ ₹ 25 ಸಾವಿರ ಚೆಕ್ ಹಾಗೂ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಎಲ್ಲರೂ ಕೊಡಗು ಜಿಲ್ಲೆಯವರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಅಕಾಡೆಮಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ, ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.