ADVERTISEMENT

ಗಮನ ಸೆಳೆದ ವ್ಯಂಗ್ಯಚಿತ್ರ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2015, 19:30 IST
Last Updated 2 ಫೆಬ್ರುವರಿ 2015, 19:30 IST

ಶ್ರವಣಬೆಳಗೊಳ: ಪ್ರಸಿದ್ಧ ವ್ಯಂಗ್ಯ­ಚಿತ್ರ­ಕಾರ ಆರ್‌.ಕೆ. ಲಕ್ಷ್ಮಣ್‌ ಸ್ಮರಣಾರ್ಥ ಪುಸ್ತಕ ಮಳಿಗೆ­ಯಲ್ಲಿ ಏರ್ಪಡಿಸಿರುವ ವ್ಯಂಗ್ಯಚಿತ್ರ ಪ್ರದರ್ಶನ ನೋಡುಗರ ಗಮನ ಸೆಳೆಯುತ್ತಿದೆ.

ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಆಶ್ರಯದಲ್ಲಿ ವ್ಯಂಗ್ಯಚಿತ್ರ ಪ್ರದ­ರ್ಶನ ಆಯೋಜಿಸಲಾಗಿದೆ. ಪ್ರದರ್ಶನ­ದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಿವೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಚಿತ್ರಣ ಅವುಗಳ ವಿಡಂಬನೆ, ಸಾಮಾ­ಜಿಕ, ಆರ್ಥಿಕ , ಧಾರ್ಮಿಕ, ಜಾಗತೀಕ­ರಣ, ಉದಾರೀಕರಣ, ಖಾಸಗೀಕರಣ. ಹೀಗೆ ಹತ್ತು ಹಲವು ಬಗೆಯ ಚಿತ್ರಗಳು ರಾರಾಜಿಸುತ್ತಿವೆ.

ಸಮಾಜದಲ್ಲಿ ನಡೆಯುವ ಘಟನೆ­ಗಳ ಸತ್ಯಾಂಶವನ್ನು ವ್ಯಂಗ್ಯಚಿತ್ರಗಳು ತಿಳಿಸುತ್ತವೆ. ನೂರುಪದಗಳಲ್ಲಿ ಹೇಳ ಬಹುದಾದದ್ದನ್ನು ಒಂದು ಚಿತ್ರ ಇಡೀ ಘಟನೆಯ ಚಿತ್ರಣ ನೀಡುವಂತಿದೆ. ಪ್ರದರ್ಶನದಲ್ಲಿ ಆರ್‌.ಕೆ. ಲಕ್ಷ್ಮಣ್,  ವ್ಯಂಗ್ಯಚಿತ್ರಗಳು ಸೇರಿದಂತೆ ವ್ಯಂಗ್ಯಚಿತ್ರ­ಕಾ­ರರಾದ ಏಕನಾಥ ಬೊಂಗಾಳೆ, ವೆಂಕಟೇಶ್‌ ಇನಾಮದಾರ ಮತ್ತು ಎಂ.ವಿ. ಶಿವರಾಂ ಸೇರಿ 15ಕ್ಕೂ ಹೆಚ್ಚು ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.

ವ್ಯವಸ್ಥೆಯಲ್ಲಿ ನಡೆಯುತ್ತಿರುವ ಘಟನೆ­ಗಳನ್ನು ಹಾಸ್ಯ ಲೇಪನದ ಮೂಲಕ ವ್ಯಂಗ್ಯಚಿತ್ರ ಸತ್ಯದ ಸಾಕ್ಷಾ­ತ್ಕಾರ ಮಾಡಿಸುತ್ತಿದೆ. ವ್ಯಂಗ್ಯಚಿತ್ರ ಪ್ರದ­ರ್ಶನದಲ್ಲಿ ರಾಜಕೀಯ ಕೃತಿಗಳು ಮನ­ಸಿಗೆ ಮುದ ನೀಡಿದವು ಎಂದು ಕೆ.ಆರ್‌. ನಗರದಿಂದ ಸಮ್ಮೇಳನಕ್ಕೆ ಆಗಮಿಸಿದ್ದ ಸಾಹಿತ್ಯಾಸಕ್ತ ಅರುಣ್‌­ಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.