ಬೆಂಗಳೂರು: ಗೂಗಲ್ ನಕ್ಷೆಯಲ್ಲಿ ಈಗ ಸ್ಥಳಗಳ ಹೆಸರು ಇಂಗ್ಲಿಷ್‍ನಲ್ಲಿ ಮಾತ್ರ ಅಲ್ಲ ಕನ್ನಡದಲ್ಲಿಯೂ ಲಭ್ಯವಿದೆ. ಇಲ್ಲಿಯವರೆಗೆ ಗೂಗಲ್ ಮ್ಯಾಪ್‍ನಲ್ಲಿ ಸ್ಥಳಗಳ ಹೆಸರು ಇಂಗ್ಲಿಷ್‍ನಲ್ಲಿ ಮಾತ್ರ ಕಾಣುತ್ತಿತ್ತು, ಇದೀಗ ಇಂಗ್ಲಿಷ್ ಜತೆಗೆ ಕನ್ನಡದಲ್ಲಿಯೂ ಸ್ಥಳದ ಹೆಸರನ್ನು ಓದಬಹುದು.
ಇಲ್ಲಿಯೂ ತಪ್ಪುಗಳಿವೆ
ಸ್ಥಳಗಳ ಹೆಸರು ಕನ್ನಡದಲ್ಲಿ ಕಾಣಿಸಿಕೊಂಡಿದ್ದರು ಕೆಲವೊಂದು ಅಕ್ಷರದೋಷಗಳೂ ಇವೆ. ಗೂಗಲ್ ಟ್ರಾನ್ಸ್ ಲೇಟರ್ ಮೂಲಕ ಕನ್ನಡ ಅನುವಾದ ಮಾಡಿದ್ದೇ ಇದಕ್ಕೆಲ್ಲಾ ಕಾರಣ. ಪಾಳ್ಯ ಎಂಬುದು ಪಲ್ಯ ಎಂದು ಅನುವಾದವಾಗಿದ್ದು, ಕ್ರಮೇಣ ಈ ಎಲ್ಲ ತಪ್ಪುಗಳು ಸರಿಯಾಗಲಿವೆ.
ಸಂತಸ ವ್ಯಕ್ತಪಡಿಸಿದ ಕನ್ನಡಿಗರು
ಗೂಗಲ್ ನಕ್ಷೆಯಲ್ಲಿ ಕನ್ನಡ ಬಳಕೆಯಾಗಿರುವುದರ ಬಗ್ಗೆ ಸಾಮಾಜಿಕ ತಾಣದಲ್ಲಿ ನೆಟಿಜನ್‍ಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.